ಬಂಟ್ವಾಳ, ನವಂಬರ್ 23, 2026 (ಕರಾವಳಿ ಟೈಮ್ಸ್) : ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿಯಾಗಿ ಕಳೆದ ಒಂದು ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದ ಕೆ ಬಿ ತೀರ್ಥಪ್ರಸಾದ್ ಅವರನ್ನು ಹಗರಿ ಬೊಮ್ಮನಹಳ್ಳಿ ಪುರಸಭಾ ಮುಖ್ಯಾಧಿಕಾರಿಯಾಗಿ ವರ್ಗಾವಣೆಗೊಳಿಸಲಾಗಿದೆ. ಇವರಿಂದ ತೆರವಾಗಿರುವ ಖಾಲಿ ಸ್ಥಾನಕ್ಕೆ ಸರಕಾರದ ಮುಂದಿನ ಆದೇಶದವರೆಗೆ ಮಂಗಳೂರಿನಲ್ಲಿ ಪ್ರೊಬೆಷನರಿ ಐಎಎಸ್ ಅಧಿಕಾರಿಯಾಗಿರುವ ಅರ್ಚಿತ್ ಪರಾಗ್ ಡೊಂಗ್ರೆ ಅವರನ್ನು ಪ್ರಭಾರ ನೆಲೆಯಲ್ಲಿ ನಿಯೋಜಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಡೀಸಿ ಆದೇಶದಂತೆ ಅರ್ಚಿತ್ ಪರಾಗ್ ಡೊಂಗ್ರೆ ಅವರು ನ 23 ರಂದು ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.
23 November 2026
- Blogger Comments
- Facebook Comments
Subscribe to:
Post Comments (Atom)












0 comments:
Post a Comment