ಬಂಟ್ವಾಳ, ನವಂಬರ್ 24, 2026 (ಕರಾವಳಿ ಟೈಮ್ಸ್) : ಬಿ ಸಿ ರೋಡು ಸಮೀಪದ ಪೊನ್ನೋಡಿ ಎಂಬಲ್ಲಿನ ಕರಾವಳಿ ಸರ್ವಿಸ್ ಸ್ಟೇಷನ್ ಬಳಿ ನ 24 ರಂದು ಅಪರಾಹ್ನ ಸುಮಾರು 3.15 ರ ವೇಳೆಗೆ ಆಕಸ್ಮಿಕವಾಗಿ ಬಾವಿಗೆ ಬಿದ್ದ ಹೋರಿಯನ್ನು ಬಂಟ್ವಾಳ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.
ಹೋರಿ ಬಾವಿಗೆ ಬಿದ್ದಿರುವ ಬಗ್ಗೆ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ತಕ್ಷಣ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿಗಳು ರಕ್ಷಣಾ ಸಾಮಾಗ್ರಿ ಬಳಸಿ ಕಾರ್ಯಾಚರಣೆ ನಡೆಸಿದ್ದು, ಬಾವಿಯೊಳಗೆ ಬಿದ್ದಿದ್ದ ಹೋರಿಯನ್ನು ಮೇಲಕ್ಕೆತ್ತುವ ಮೂಲಕ ಸುರಕ್ಷಿತವಾಗಿ ದಡ ಸೇರಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ಹರೀಶ್ ಕೆ ಟಿ, ಪ್ರಮುಖ ಅಗ್ನಿಶಾಮಕ ರೋಹಿತ್, ಅಗ್ನಿಶಾಮಕ ವಾಹನ ಚಾಲಕ ಕಿರಣ್ ಕುಮಾರ್, ಫೈರ್ ಫೈಟರ್ ಗಳಾದ ಸತೀಶ್ ಸಂಗಡಿ, ವಿಜಯ ಕುಮಾರ್ ಪಿ ಬೂದಗಟ್ಟಿ ಹಾಗೂ ಧರ್ಮ ಎಂ ಅವರುಗಳು ಪಾಲ್ಗೊಂಡಿದ್ದರು.

















0 comments:
Post a Comment