ಜಾಗದ ವಿಚಾರದ ತಕರಾರಿನಲ್ಲಿ ದಂಪತಿಗಳಿಗೆ ಹಲ್ಲೆ ನಡೆಸಿದ‌ ಆರೋಪಿಗಳಿಗೆ ದಂಡದ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು - Karavali Times ಜಾಗದ ವಿಚಾರದ ತಕರಾರಿನಲ್ಲಿ ದಂಪತಿಗಳಿಗೆ ಹಲ್ಲೆ ನಡೆಸಿದ‌ ಆರೋಪಿಗಳಿಗೆ ದಂಡದ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು - Karavali Times

728x90

6 November 2026

ಜಾಗದ ವಿಚಾರದ ತಕರಾರಿನಲ್ಲಿ ದಂಪತಿಗಳಿಗೆ ಹಲ್ಲೆ ನಡೆಸಿದ‌ ಆರೋಪಿಗಳಿಗೆ ದಂಡದ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು


ಬಂಟ್ವಾಳ, ನವೆಂಬರ್ 06, 2026 (ಕರಾವಳಿ ಟೈಮ್ಸ್) : 

ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಸರಪಾಡಿ ಗ್ರಾಮದ ಅಲ್ಲಿಪಾದೆ ಎಂಬಲ್ಲಿ 2022 ಅಕ್ಟೋಬರ್ 24 ರಂದು ರಾತ್ರಿ ಜಾಗದ ವಿಚಾರದ ತಕರಾರಿನಲ್ಲಿ ಅಕ್ಕಪಕ್ಕದ ಮನೆಯವರ ನಡುವೆ ಮನಸ್ತಾಪ ಉಂಟಾಗಿ, ಪರಿಶಿಷ್ಟ ಜಾತಿಗೆ ಸೇರಿದ ರಾಜೇಶ ಮತ್ತು ಅವರ ಪತ್ನಿಗೆ ನೆರೆಮನೆಯ ನಿವಾಸಿಗಳಾದ ಕೃಷ್ಣಪ್ಪ ನಾಯ್ಕ, ಆತನ ಪತ್ನಿ ಜಯಂತಿ, ಮಗ ವಿನೋದ, ಪಕ್ಕದ ಮನೆಯವರಾದ ಮನೂ ಮತ್ತು ಲಕ್ಷ್ಮಣ ಅವರು ಇತರ ನಾಲ್ಕೈದು ಜನರ ಜೊತೆ ಸೇರಿ ಹಲ್ಲೆ ನಡೆಸಿ ಜೀವ ಬೆದರಿಕೆ  ಒಡ್ಡಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

 ಪ್ರಕರಣದ ತನಿಖೆ‌ ನಡೆಸಿದ ಅಂದಿನ ಬಂಟ್ವಾಳ ಎಎಸ್ಪಿ ಪ್ರತಾಪ್ ಸಿಂಗ್ ಥೋರಟ್ ಅವರು ಆರೋಪಿಗಳ ವಿರುದ್ಧ  ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಈ ಬಗ್ಗೆ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ನ್ಯಾಯಾಧೀಶ ಜಗದೀಶ್ ವಿ ಎನ್ ಅವರು ಆರೋಪಿಗಳಾದ ಕೃಷ್ಣಪ್ಪ ನಾಯ್ಕ್, ಜಯಂತಿ, ಮುನ್ನ ಅಲಿಯಾಸ್ ಹೇಮಂತ್ ನಾಯ್ಕ್, ವಿಶ್ವನಾಥ, ಭೋಜ, ಹರಿ ಅಲಿಯಾಸ್ ಹರಿಶ್ಚಂದ್ರ, ಗುಲಾಬಿ ಹಾಗೂ ರುಕ್ಮಿಣಿ ಎಂಬವರ ವಿರುದ್ಧದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನವೆಂಬರ್ 5 ರಂದು ಒಟ್ಟು  1,01,000/- ರೂಪಾಯಿ ದಂಡ ವಿಧಿಸಿ ಅದೇಶಿಸಿದ್ದಾರೆ. ಪ್ರಕರಣದಲ್ಲಿ ಸರಕಾರಿ ಅಭಿಯೋಜಕ ಜ್ಯೋತಿ ಪ್ರಮೋದ್ ನಾಯಕ್ ಅವರು ವಾದ ಮಂಡಿಸಿದ್ದಾರೆ.

Next
This is the most recent post.
Older Post
  • Blogger Comments
  • Facebook Comments

0 comments:

Post a Comment

Item Reviewed: ಜಾಗದ ವಿಚಾರದ ತಕರಾರಿನಲ್ಲಿ ದಂಪತಿಗಳಿಗೆ ಹಲ್ಲೆ ನಡೆಸಿದ‌ ಆರೋಪಿಗಳಿಗೆ ದಂಡದ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು Rating: 5 Reviewed By: lk
Scroll to Top