ಧರ್ಮಸ್ಥಳ ನೇತ್ರಾವತಿ ಸ್ನಾನ ಘಟ್ಟದ ಬಳಿ ಮಾನವ ದೇಹದ ತಲೆ ಬುರುಡೆ ಪತ್ತೆ : ಠಾಣೆಯಲ್ಲಿ ದೂರರ್ಜಿ ದಾಖಲು - Karavali Times ಧರ್ಮಸ್ಥಳ ನೇತ್ರಾವತಿ ಸ್ನಾನ ಘಟ್ಟದ ಬಳಿ ಮಾನವ ದೇಹದ ತಲೆ ಬುರುಡೆ ಪತ್ತೆ : ಠಾಣೆಯಲ್ಲಿ ದೂರರ್ಜಿ ದಾಖಲು - Karavali Times

728x90

12 November 2026

ಧರ್ಮಸ್ಥಳ ನೇತ್ರಾವತಿ ಸ್ನಾನ ಘಟ್ಟದ ಬಳಿ ಮಾನವ ದೇಹದ ತಲೆ ಬುರುಡೆ ಪತ್ತೆ : ಠಾಣೆಯಲ್ಲಿ ದೂರರ್ಜಿ ದಾಖಲು

ಧರ್ಮಸ್ಥಳ, ನವಂಬರ್ 12, 2026 (ಕರಾವಳಿ ಟೈಮ್ಸ್) : ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನ ಘಟ್ಟದ ಬಳಿ ಮಾನವ ದೇಹದ ತಲೆ ಬುರುಡೆ ಪತ್ತೆಯಾದ ಘಟನೆ ನ 12 ರಂದು ನಡೆದಿದ್ದು, ಈ ಬಗ್ಗೆ ಠಾಣೆಯಲ್ಲಿ ದೂರರ್ಜಿ ದಾಖಲಾಗಿದೆ. 

ಬಂಟ್ವಾಳ ಮೂಲದ ವ್ಯಕ್ತಿಯೋರ್ವರು ನ 12 ರಂದು ಸಂಜೆ ವೇಳೆ, ತನ್ನ ಕೆಲಸದಲ್ಲಿ ತೊಡಗಿಕೊಂಡು ಧರ್ಮಸ್ಥಳ ಗ್ರಾಮದ, ನೇತ್ರಾವತಿ ಸ್ನಾನ ಘಟ್ಟದ ಬಳಿ ರಾಜ್ಯ ಹೆದ್ದಾರಿ ಪಕ್ಕದಲ್ಲಿ ವಿದ್ಯುತ್ ಕಂಬಗಳಿಗೆ ಅಡ್ಡಲಾಗಿರುವ ಮರದ ರೆಂಬೆಗಳನ್ನು ಕತ್ತರಿಸುತ್ತಿದ್ದಾಗ,  ಹೆದ್ದಾರಿಯ ಬದಿಯಲ್ಲಿ ಮಾನವ ದೇಹದ ಬುರುಡೆಯೊಂದು ಕಂಡುಬಂದಿದೆ ಎಂಬುದಾಗಿ ಧರ್ಮಸ್ಥಳ ಪೆÇಲೀಸ್ ಠಾಣೆಯಲ್ಲಿ ದೂರರ್ಜಿ ಸಲ್ಲಿಸಿರುತ್ತಾರೆ. ಅದರಂತೆ ದೂರರ್ಜಿ ಸಂಖ್ಯೆ 422/2026 ರಂತೆ ದೂರು ಸ್ವೀಕರಿಸಲಾಗಿದ್ದು, ವಿಚಾರಣೆ ನಡೆಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಎಸ್ಪಿ ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಧರ್ಮಸ್ಥಳ ನೇತ್ರಾವತಿ ಸ್ನಾನ ಘಟ್ಟದ ಬಳಿ ಮಾನವ ದೇಹದ ತಲೆ ಬುರುಡೆ ಪತ್ತೆ : ಠಾಣೆಯಲ್ಲಿ ದೂರರ್ಜಿ ದಾಖಲು Rating: 5 Reviewed By: karavali Times
Scroll to Top