ಜಾನುವಾರು ಕಳವು ಯತ್ನ ಪ್ರಕರಣ ಬೇಧಿಸಿದ ಸುಳ್ಯ ಪೊಲೀಸರು : ಜಾನುವಾರು ಸಹಿತ ಇಬ್ಬರು ಖದೀಮರು ಅರೆಸ್ಟ್ - Karavali Times ಜಾನುವಾರು ಕಳವು ಯತ್ನ ಪ್ರಕರಣ ಬೇಧಿಸಿದ ಸುಳ್ಯ ಪೊಲೀಸರು : ಜಾನುವಾರು ಸಹಿತ ಇಬ್ಬರು ಖದೀಮರು ಅರೆಸ್ಟ್ - Karavali Times

728x90

18 November 2026

ಜಾನುವಾರು ಕಳವು ಯತ್ನ ಪ್ರಕರಣ ಬೇಧಿಸಿದ ಸುಳ್ಯ ಪೊಲೀಸರು : ಜಾನುವಾರು ಸಹಿತ ಇಬ್ಬರು ಖದೀಮರು ಅರೆಸ್ಟ್


ಸುಳ್ಯ, ನವೆಂಬರ್ 18, 2026 (ಕರಾವಳಿ ಟೈಮ್ಸ್) : ಸುಳ್ಯ ಕಸಬಾ ಗ್ರಾಮದ ಸುಳ್ಯ  ಗಾಂಧಿನಗರ ಶಾಲಾ ಮೈದಾನದ ಬಳಿ ಜಾನುವಾರು ಕಳವಿಗೆ ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಸುಳ್ಯ ಪೊಲೀಸರು ಬಂಧಿಸಿದ ಘಟನೆ ನವೆಂಬರ್ 18 ರಂದು ಬೆಳಗಿನ ಜಾವ ನಡೆದಿದೆ.

ಬಂಧಿತ ಆರೋಪಗಳನ್ನು ಸುಳ್ಯ-ಆಲೆಟ್ಟಿ ನಿವಾಸಿಗಳಾದ ಹಾಶಿರ್‌ ಎ (28) ಹಾಗೂ ಸಂಶುದ್ದೀನ್‌ ಎಸ್‌.ಎಂ ( 25) ಎಂದು ಹೆಸರಿಸಲಾಗಿದೆ.

 ಜಾನುವಾರುಗಳನ್ನು  ಕಳ್ಳತನ ಮಾಡಿ  ಸಾಗಾಟ   ಮಾಡಲು ಯತ್ನಿಸುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಸುಳ್ಯ ಠಾಣಾ ಪಿಎಸ್ಸೈ ಉದಯ ರವಿ  ಅವರ ನೇತೃತ್ವದ ಪೊಲೀಸರು ಈ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಪೊಲೀಸರು ಸ್ಥಳಕ್ಕೆ ತೆರಳಿದಾಗ ಇಬ್ಬರು  ಆರೋಪಿಗಳು  ಮೈದಾನದಲ್ಲಿದ್ದ  ಕಂಬಕ್ಕೆ  ಎರಡು ಜಾನುವಾರುಗಳನ್ನು ಹಗ್ಗದಲ್ಲಿ ಕಟ್ಟಿ ಹಾಕಿರುವುದು ಕಂಡುಬಂದಿದೆ. ಅವರನ್ನು ಹಿಡಿದು ವಿಚಾರಿಸಿದಾಗ ಜಾನುವಾರುಗಳನ್ನು ಮಾಂಸ ಮಾಡಿ ಮಾರಾಟ   ಮಾಡುವ ಉದ್ದೇಶದಿಂದ ಕಳ್ಳತನ ಮಾಡಲು ಪ್ರಯತ್ನಿಸುತ್ತಿರುವುದಾಗಿ ತಿಳಿಸಿರುತ್ತಾರೆ. ಮುಂದಿನ ಕಾನೂನು ಕ್ರಮಕ್ಕಾಗಿ ಆರೋಪಿಗಳನ್ನು ವಶಕ್ಕೆ ಪಡೆದು, ಕಳ್ಳತನ ಮಾಡಲು ಸ್ಥಳಕ್ಕೆ  ಆರೋಪಿಗಳು ಬಂದ ದ್ವಿಚಕ್ರ ವಾಹನ ಹಾಗೂ ಎರಡು ಜಾನುವಾರುಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ವಿಚಾರಣೆ ನಡೆಸುತ್ತಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಜಾನುವಾರು ಕಳವು ಯತ್ನ ಪ್ರಕರಣ ಬೇಧಿಸಿದ ಸುಳ್ಯ ಪೊಲೀಸರು : ಜಾನುವಾರು ಸಹಿತ ಇಬ್ಬರು ಖದೀಮರು ಅರೆಸ್ಟ್ Rating: 5 Reviewed By: lk
Scroll to Top