ಅಪ್ರಾಪ್ತ ಬಾಲಕನಿಗೆ ತಂಡದಿಂದ ಹಲ್ಲೆ : 9 ಮಂದಿ ಆರೋಪಿಗಳ ವಿರುದ್ದ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು - Karavali Times ಅಪ್ರಾಪ್ತ ಬಾಲಕನಿಗೆ ತಂಡದಿಂದ ಹಲ್ಲೆ : 9 ಮಂದಿ ಆರೋಪಿಗಳ ವಿರುದ್ದ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು - Karavali Times

728x90

15 November 2026

ಅಪ್ರಾಪ್ತ ಬಾಲಕನಿಗೆ ತಂಡದಿಂದ ಹಲ್ಲೆ : 9 ಮಂದಿ ಆರೋಪಿಗಳ ವಿರುದ್ದ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಪುತ್ತೂರು, ನವಂಬರ್ 15, 2026 (ಕರಾವಳಿ ಟೈಮ್ಸ್) : ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ನಿವಾಸಿ, ಅಪ್ರಾಪ್ತ ಬಾಲಕನಿಗೆ ತಂಡವೊಂದು ರಸ್ತೆಯಲ್ಲಿ ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು ಹಲ್ಲೆ ನಡೆಸಿದ ಘಟನೆ ನ 5 ರಂದು ರಾತ್ರಿ ಸಂಭವಿಸಿದೆ. ಹಲ್ಲೆ ನಡೆಸಿದ ಆರೋಪಿಗಳನ್ನು ಸುಧಾಕರ, ಹರೀಶ್, ಪೇರಿಗೇರಿ ಚಂದ್ರ, ವಸಂತಿ, ಮೋಹನ್, ಗೋವಚಂದ್ರ, ಟಿ ಸಿ ಚಂದ್ರ, ಪ್ರಮೀಳಾ ಹಾಗೂ ಸುಮಾ ಎಂದು ಹೆಸರಿಸಲಾಗಿದೆ. 

ನ 5 ರಂದು ರಾತ್ರಿ ಬಾಲಕ ತನ್ನ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ, ಆತನ ಪರಿಚಯದ ಸುಧಾಕರ, ಪೇರಿಗೇರಿ ಚಂದ್ರ, ಹರೀಶ್ ಎಂಬವರುಗಳು ರಸ್ತೆ ಬದಿಯಲ್ಲಿ ನಿಂತು ಬಾಲಕನಿಗೆ ಅವಾಚ್ಯವಾಗಿ ಬೈದಿರುತ್ತಾರೆ. ಕೆಲಹೊತ್ತಿನ ನಂತರ ಆರೋಪಿಗಳಾದ ಸುಧಾಕರ, ಹರೀಶ್, ಪೇರಿಗೇರಿ ಚಂದ್ರ, ವಸಂತಿ, ಮೋಹನ್, ಗೋವಚಂದ್ರ, ಟಿ.ಸಿ. ಚಂದ್ರ, ಪ್ರಮೀಳ ಹಾಗೂ ಸುಮ ಅವರುಗಳು ಬಾಲಕನ ಮನೆಯಂಗಳಕ್ಕೆ ಬಂದು ಬಾಲಕಗೆ ಹಲ್ಲೆ ನಡೆಸಿರುತ್ತಾರೆ. ಜಗಳ ಬಿಡಿಸಲು ಬಂದ ಬಾಲಕನ ತಾಯಿ ಹಾಗೂ ತಂಗಿಯನ್ನೂ ದೂಡಿ ಹಾಕಿರುತ್ತಾರೆ. ಹಲ್ಲೆಯಿಂದಾದ ಗಾಯಕ್ಕೆ ಬಾಲಕ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ ಎಂಬುದಾಗಿ ನೀಡಿದ ದೂರಿನಂತೆ ಪುತ್ತೂರು ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ನ 11 ರಂದು ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಅಪ್ರಾಪ್ತ ಬಾಲಕನಿಗೆ ತಂಡದಿಂದ ಹಲ್ಲೆ : 9 ಮಂದಿ ಆರೋಪಿಗಳ ವಿರುದ್ದ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು Rating: 5 Reviewed By: karavali Times
Scroll to Top