ಮಾಣಿ : ಬೊಲೆರೋ ವಾಹನ ಡಿಕ್ಕಿ ಹೊಡೆದು ವ್ಯಕ್ತಿಯ ಕೊಲೆ ಯತ್ನ, ಆರೋಪಿ ಬಂಧನ - Karavali Times ಮಾಣಿ : ಬೊಲೆರೋ ವಾಹನ ಡಿಕ್ಕಿ ಹೊಡೆದು ವ್ಯಕ್ತಿಯ ಕೊಲೆ ಯತ್ನ, ಆರೋಪಿ ಬಂಧನ - Karavali Times

728x90

11 November 2026

ಮಾಣಿ : ಬೊಲೆರೋ ವಾಹನ ಡಿಕ್ಕಿ ಹೊಡೆದು ವ್ಯಕ್ತಿಯ ಕೊಲೆ ಯತ್ನ, ಆರೋಪಿ ಬಂಧನ

ಬಂಟ್ವಾಳ, ನವಂಬರ್ 11, 2026 (ಕರಾವಳಿ ಟೈಮ್ಸ್) : ಮಾಣಿ ಜಂಕ್ಷನ್ನಿನ ಪಟಾಕಿ ಅಂಗಡಿ ಬಳಿ ನಿಂತಿದ್ದ ವ್ಯಕ್ತಿಗೆ ಆರೋಪಿಯೋರ್ವ ಬೊಲೆರೋ ವಾಹನ ಹರಿಸಿ ಕೊಲೆಗೆ ಯತ್ನಿಸಿದ ಘಟನೆ ನ 9 ರಂದು ಸಂಜೆ ವೇಳೆ ನಡೆದಿದೆ. 

ಮಾಣಿ ನಿವಾಸಿ ವಿಕೇಶ್ ಕೆ (32) ಅವರು ನ 9 ರಂದು ಸಂಜೆ ಮಾಣಿ ಜಂಕ್ಷನ್ನಿನಲ್ಲಿರುವ ಮೈದಾನದಲ್ಲಿನ ಪಟಾಕಿ ಅಂಗಡಿಯ ಬಳಿ ನಿಂತಿದ್ದಾಗ, ಪರಿಚಯದ ಆರೋಪಿ ಜಗದೀಶ್ ಜೈನ್ ಎಂಬಾತ ಬೊಲೆರೋ ವಾಹನವನ್ನು ಚಲಾಯಿಸಿಕೊಂಡು ಡಿಕ್ಕಿಪಡಿಸಲು ಬೊಲೆರೋ ಜೀಪಿನಲ್ಲಿ ಅತೀ ವೇಗದಿಂದ ಬಂದಿರುತ್ತಾನೆ. ವಿಕೇಶ್ ಅವರು ಬೊಲೆರೊ ಜೀಪಿನ ಬಾನೆಟ್ ಮೇಲೆ ಹಾರಿ ಅಲ್ಲಿಯೇ ಇದ್ದ ಮಣ್ಣಿನ ಮೇಲೆ ಬಿದ್ದು ತಪ್ಪಿಸಿಕೊಂಡಿದ್ದಾರೆ. ಘಟನೆಯಿಂದ ವಿಕೇಶ್ ಅವರ ಎಡ ಕಾಲಿನ ಮೊಣಗಂಟಿಗೆ ಗಾಯವಾಗಿರುತ್ತದೆ. ವಿಕೇಶ್ ಅವರ ಸಂಬಂಧಿಕ ತೀರ್ಥಪ್ರಸಾದ್ ಎಂಬವರಿಗೂ ಆರೋಪಿ ಜೀಪಿನಿಂದ ಡಿಕ್ಕಿ ಹೊಡೆಯಲು ಯತ್ನಿಸಿದ್ದು ಅವರೂ ತಪ್ಪಿಸಿಕೊಂಡಿದ್ದಾರೆ. ಈ ವೇಳೆ ಜನ ಸೇರುವುದನ್ನು ಕಂಡ ಆರೋಪಿ ವಿಕೇಶ್ ಅವರನ್ನುದ್ದೇಶಿಸಿ ಅವ್ಯಾಚವಾಗಿ ಬೈದು ಮುಂದಕ್ಕೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಒಡ್ಡಿ ತೆರಳಿರುತ್ತಾನೆ. ಈ ಬಗ್ಗೆ ವೀಕೇಶ್ ಅವರು ನೀಡಿದ ದೂರಿನಂತೆ ವಿಟ್ಲ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಜಗದೀಶ್ ಜೈನ್ ಎಂಬಾತನನ್ನು ಪೊಲೀಸರು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಮಾಣಿ : ಬೊಲೆರೋ ವಾಹನ ಡಿಕ್ಕಿ ಹೊಡೆದು ವ್ಯಕ್ತಿಯ ಕೊಲೆ ಯತ್ನ, ಆರೋಪಿ ಬಂಧನ Rating: 5 Reviewed By: karavali Times
Scroll to Top