ಬಂಟ್ವಾಳ, ನವಂಬರ್ 26, 2026 (ಕರಾವಳಿ ಟೈಮ್ಸ್) : ತನ್ನ ಮನೆ ಬಳಿ ಬಂದು ಗಲಾಟೆ ಮಾಡಿದ ತಂದೆಯ ಸಹೋದರನನ್ನು ಇರಿದು ಕೊಂದ ಯುವತಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಯುವತಿಯನ್ನು ಹೃತಿಕಾ (24) ಎಂದು ಗುರುತಿಸಲಾಗಿದೆ.
ಕನ್ಯಾನ ಗ್ರಾಮದ ನಂದರಬೆಟ್ಟು ಈಕೆ ಎಂಬಲ್ಲಿ ನ 24 ರಂದು ಸಂಜೆ 7 ಗಂಟೆ ವೇಳೆಗೆ 40-50ರ ಅಂದಾಜು ಪ್ರಾಯದ ತನ್ನ ತಂದೆಯ ಸಹೋದರ ಚೆನ್ನಯ್ಯ ಪೂಜಾರಿ ಎಂಬವರನ್ನು ಇರಿದು ಕೊಲೆ ಮಾಡಿದ್ದಳು. ಇವರು ಸಹೋದರನ ಮಗಳು ವಾಸವಿದ್ದ ಮನೆಯ ಬಳಿ ಗಲಾಟೆ ನಡೆಸುತ್ತಿದ್ದಾಗ, ಮಾತಿನ ಚಕಮಕಿ ನಡೆದು ಸಹೋದರನ ಮಗಳು ಹರಿತವಾದ ಸಾಧನದಿಂದ ಚುಚ್ಚಿದ್ದು, ಗಾಯದ ಪರಿಣಾಮ ಚೆನ್ನಯ್ಯ ಪೂಜಾರಿ ಮೃತಪಟ್ಟಿರುತ್ತಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ನ 25 ರಂದು ಆರೋಪಿತೆಯನ್ನು ದಸ್ತಗಿರಿ ಮಾಡಿದ್ದು, ಆಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆಕೆಗೆ ನ್ಯಾಯಾಂಗ ಬಂಧನ ವಿಧಿಸಿದೆ.












0 comments:
Post a Comment