ಬಂಟ್ವಾಳ, ನವಂಬರ್ 15, 2026 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಸಮೀಪದ ಆಲಡ್ಕ ಮುಹಿಯುದ್ದೀನ್ ಜುಮಾ ಮಸೀದಿಯ ಖಾಝಿಯಾಗಿ ಹುಜ್ಜತುಲ್ ಉಲಮಾ ಮೌಲಾನಾ ಎ ನಜೀಬ್ ಉಸ್ತಾದ್ ವಂಡೂರು ಅವರ ಖಾಝಿ ಸ್ವೀಕಾರ ಸಮಾರಂಭ ನವೆಂಬರ್ 19 ರಂದು ಗುರುವಾರ ಮಗ್ರಿಬ್ ನಮಾಝ್ ಬಳಿಕ ಮಸೀದಿ ವಠಾರದಲ್ಲಿ ನಡೆಯಲಿದೆ.
ಸಯ್ಯಿದ್ ಹಾಶಿಂ ಬಾಫಖಿ ತಂಙಳ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಸಯ್ಯಿದ್ ಎನ್ ಪಿ ಎಂ ಝೈನುಲ್ ಆಬಿದೀನ್ ತಂಙಳ್ ಉದ್ಘಾಟಿಸುವರು. ಮಸೀದಿ ಮುದರ್ರಿಸ್ ಹಾಜಿ ಬಿ ಎಚ್ ಅಬೂಸ್ವಾಲಿಹ್ ಉಸ್ತಾದ್ ಭಾಗವಹಿಸುವರು ಎಂದು ಮಸೀದಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಮೋನಾಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.














0 comments:
Post a Comment