ಬಂಟ್ವಾಳ, ನವಂಬರ್ 16, 2026 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಸಮೀಪದ ಆಲಡ್ಕ ಬದ್ರಿಯಾ ಜುಮಾ ಮಸೀದಿ ಆಶ್ರಯದಲ್ಲಿ ಶೈಖ್ ಮುಹಿಯುದ್ದೀನ್ ಅಬ್ದುಲ್ ಖಾದಿರ್ ಜೀಲಾನಿ (ಖ ಸಿ) ತಂಙಳ್ ಅವರ 887ನೇ ಖುತುಬಿಯ್ಯತ್ ವಾರ್ಷಿಕ, ಮುಹಿಯುದ್ದೀನ್ ರಾತೀಬಿನ 70ನೇ ವಾರ್ಷಿಕ ಹಾಗೂ ತಾಜುಲ್ ಉಲಮಾ ಅನುಸ್ಮರಣೆಯ ಪ್ರಯುಕ್ತ 2 ದಿನಗಳ ಧಾರ್ಮಿಕ ಕಾರ್ಯಕ್ರಮವು ನವೆಂಬರ್ 20 ಹಾಗೂ 21 ರಂದು ಇಲ್ಲಿನ ಮಸೀದಿ ವಠಾರದಲ್ಲಿನ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ.
ನ 20 ರಂದು ಅಸರ್ ನಮಾಝ್ ಬಳಿಕ ತಾಜುಲ್ ಉಲಮಾ ಮೌಲಿದ್ ಹಾಗೂ ದರ್ಸ್ ವಿದ್ಯಾರ್ಥಿಗಳಿಂದ ಆರ್ಟ್ ಸ್ಪಾಕ್ 2.0 ಹಾಗೂ ಮಗ್ರಿಬ್ ನಮಾಝ್ ಬಳಿಕ ತಾಜುಲ್ ಅನುಸ್ಮರಣೆ ಕಾರ್ಯಕ್ರಮ ನಡೆಯಲಿದ್ದು, ಸಯ್ಯಿದ್ ಅಬ್ದುರ್ರಹ್ಮಾನ್ ಮಶ್ ಹೂದ್ ಅಝ್ ಹರಿ ತಂಙಳ್ ಕೂರತ್ ಅವರು ದುವಾಶೀರ್ವಚನಗೈಯುವರು. ಮಸೀದಿ ಖತೀಬ್ ಹಾಜಿ ಕೆ ಐ ಆಶ್ರಫ್ ಸಖಾಫಿ ಅಲ್-ಕಾಮಿಲ್ ಸವಣೂರು ಅವರು ಅಧ್ಯಕ್ಷತೆ ವಹಿಸಲಿದ್ದು, ಅನುಸ್ಮರಣಾ ಭಾಷಣಗೈಯುವರು.
ನ 21 ರಂದು ಮಗ್ರಿಬ್ ನಮಾಝ್ ಬಳಿಕ ಶೈಖ್ ಜೀಲಾನಿ (ಖ ಸಿ) ವಾರ್ಷಿಕ ನಡೆಯಲಿದ್ದು, ಅಬ್ದುಲ್ ರಹ್ಮಾನ್ ಸಾದಾತ್ ಬಾ ಅಲವಿ ತಂಙಳ್ ಬಾ ಅಲವಿ ಅವರು ದುವಾಶಿರ್ವಚನಗೈಯಲಿದ್ದು, ಮೂರುಗೋಳಿ ಖತೀಬ್ ಅಥಾವುಲ್ಲ ಹಿಮಮಿ ಕುಪ್ಪೆಟ್ಟಿ ಮುಖ್ಯ ಭಾಷಣಗೈಯುವರು. ಮಸೀದಿ ಅಧ್ಯಕ್ಷ ಹಾಜಿ ಪಿ ಅಬ್ದುಲ್ ಅಲೀಂ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ತೌಹೀದ್, ಮದ್ರಸ ಮುಖ್ಯೋಫಾಧ್ಯಾಯ ಉಸ್ಮಾನ್ ಮದನಿ, ಅಧ್ಯಾಪಕರುಗಳಾದ ಇಸ್ಮಾಯಿಲ್ ಫುರ್ಖಾನಿ, ರಫೀಕ್ ಹಿಮಮಿ ಭಾಗವಹಿಸಲಿದ್ದಾರೆ ಮಸೀದಿ ಆಡಳಿತ ಸಮಿತಿ ಪ್ರಕಟಣೆ ತಿಳಿಸಿದೆ.













0 comments:
Post a Comment