ಮಂಗಳೂರು, ನವಂಬರ್ 20, 2026 (ಕರಾವಳಿ ಟೈಮ್ಸ್) : ಕರ್ನಾಟಕ ವಿಧಾನಪರಿಷತ್ ಸಭಾಪತಿ ಸಲೀಂ ಅಹಮದ್ ಅವರು ನವೆಂಬರ್ 23 ರಂದು ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ನವೆಂಬರ್ 23 ರಂದು ಬೆಳಿಗ್ಗೆ 10 ಗಂಟೆಗೆ ಮಂಗಳೂರಿಗೆ ಆಗಮನ, 11.30ಕ್ಕೆ ನಗರದ ಪುರಭವನದಲ್ಲಿ ನಡೆಯುವ ಅಭಿನಂದನೆ ಸಮಿತಿ ಮಂಗಳೂರು ವತಿಯಿಂದ ಹಮ್ಮಿಕೊಂಡಿರುವ ಸನ್ಮಾನ ಕಾರ್ಯಕ್ರಮ, ಸಂಜೆ 4.30ಕ್ಕೆ ಮಂಗಳೂರು ತಾಜ್ ವಿವಾಂತ ಹೋಟೆಲಿನಲ್ಲಿ ಜಿಲ್ಲೆಯ ಪ್ರಮುಖ ಆಹ್ವಾನಿತರೊಂದಿಗೆ ಆಯೋಜಿಸಿರುವ ಸ್ನೇಹಕ್ಕೂಟ ಕಾರ್ಯಕ್ರಮ, ನಂತರ ನಗರದಲ್ಲಿ ವಾಸ್ತವ್ಯ. ನವೆಂಬರ್ 24 ರಂದು ಬೆಳಿಗ್ಗೆ 9.30ಕ್ಕೆ ಗಂಟೆಗೆ ಸಕ್ರ್ಯೂಟ್ ಹೌಸಿನಲ್ಲಿ ಪತ್ರಿಕಾಗೋಷ್ಠಿ, 11.40ಕ್ಕೆ ಹೈದರಾಬಾದಿಗೆ ತೆರಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
20 November 2026
- Blogger Comments
- Facebook Comments
Subscribe to:
Post Comments (Atom)












0 comments:
Post a Comment