ಡಿಸೆಂಬರ್ 1 ರಂದು ಕಾವಳಕಟ್ಟೆ ಅಲ್-ಖಾದಿಸ ಶಾಲೆಯಲ್ಲಿ ಬಂಟ್ವಾಳ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ - Karavali Times ಡಿಸೆಂಬರ್ 1 ರಂದು ಕಾವಳಕಟ್ಟೆ ಅಲ್-ಖಾದಿಸ ಶಾಲೆಯಲ್ಲಿ ಬಂಟ್ವಾಳ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ - Karavali Times

728x90

28 November 2026

ಡಿಸೆಂಬರ್ 1 ರಂದು ಕಾವಳಕಟ್ಟೆ ಅಲ್-ಖಾದಿಸ ಶಾಲೆಯಲ್ಲಿ ಬಂಟ್ವಾಳ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ

ಬಂಟ್ವಾಳ, ನವಂಬರ್ 28, 2026 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಬಂಟ್ವಾಳ ತಾಲೂಕು, ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ, ಬಂಟ್ವಾಳ ಹಾಗೂ ಕಾವಳಕಟ್ಟೆ-ಬೆಂಗತ್ತೋಡಿ ಅಲ್-ಖಾದಿಸ ಆಂಗ್ಲ ಮಾಧ್ಯಮ ಶಾಲೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಬಂಟ್ವಾಳ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ 2026-2027 ಕಾರ್ಯಕ್ರಮವು ಡಿಸೆಂಬರ್ 1 ರಂದು ಮಂಗಳವಾರ ಬೆಳಿಗ್ಗೆ 9.30 ರಿಂದ ಅಲ್-ಖಾದಿಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಲಿದೆ. 

ಸ್ಥಳೀಯ ಶಾಸಕರ ಸಹಿತ ಹಲವು ಮಂದಿ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಬಂಟ್ವಾಳ ತಾಲೂಕಿನ ವಿವಿಧ ಶಾಲೆಗಳ ಸುಮಾರು 1100 ವಿದ್ಯಾರ್ಥಿಗಳು ಹಾಗೂ 200 ಜನ ತೀರ್ಪುಗಾರರು ಪಾಲ್ಗೊಳ್ಳುವರು. ಒಟ್ಟು 22 ಕೊಠಡಿಯಲ್ಲಿ ಪ್ರಾಥಮಿಕ ವಿಭಾಗ ಕಿರಿಯ, ಪ್ರಾಥಮಿಕ ವಿಭಾಗ ಹಿರಿಯ, ಪ್ರೌಢ ಶಾಲಾ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿದೆ. ಬೆಳಿಗ್ಗೆ 9.30ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಆ ಬಳಿಕ ನಿರಂತರ ಸ್ಪರ್ಧೆಗಳು ನಡೆಯಲಿದೆ. ಅಪರಾಹ್ನ 3.30ರೊಳಗೆ ಕಾರ್ಯಕ್ರಮ ಮುಗಿಸುವ ಸಿದ್ದತೆ ನಡೆಸಲಾಗಿದೆ ಎಂದು ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ. 

Next
This is the most recent post.
Older Post
  • Blogger Comments
  • Facebook Comments

0 comments:

Post a Comment

Item Reviewed: ಡಿಸೆಂಬರ್ 1 ರಂದು ಕಾವಳಕಟ್ಟೆ ಅಲ್-ಖಾದಿಸ ಶಾಲೆಯಲ್ಲಿ ಬಂಟ್ವಾಳ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ Rating: 5 Reviewed By: karavali Times
Scroll to Top