ಬಂಟ್ವಾಳ, ನವಂಬರ್ 21, 2026 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿ ಮಾಜಿ ಅಧ್ಯಕ್ಷ, ಹಿರಿಯ ಬಿಜೆಪಿ ಮುಖಂಡ ಹಾಜಿ ಉಸ್ಮಾನ್ ಪಾಣೆಮಂಗಳೂರು (77) ಅವರು ವಯೋ ಸಹಜ ಅನಾರೋಗ್ಯದಿಂದ ನವೆಂಬರ್ 21 ರಂದು ಶನಿವಾರ ಸಂಜೆ ಮೆಲ್ಕಾರ್-ರೆಂಗೇಲು ಪುತ್ರನ ಮನೆಯಲ್ಲಿ ನಿಧನರಾಗಿದ್ದಾರೆ.
ಮೂಲತಃ ಪಾಣೆಮಂಗಳೂರು ಸಮೀಪದ ಆಲಡ್ಕ-ಬಂಗ್ಲೆಗುಡ್ಡೆ ನಿವಾಸಿಯಾಗಿರುವ ಇವರು ಅನಾರೋಗ್ಯದ ನಿಮಿತ್ತ ಕಳೆದ ಕೆಲ ಸಮಯಗಳಿಂದ ಮೆಲ್ಕಾರ್ ಸಮೀಪದ ರೆಂಗೇಲುವಿನ ಪುತ್ರನ ಮನೆಯಲ್ಲಿ ವಾಸವಾಗಿದ್ದರು. ನ 21 ರಂದು ಶನಿವಾರ ಸಂಜೆ ಸುಮಾರು 5.10ರ ವೇಳೆಗೆ ನಿಧನರಾಗಿದ್ದಾರೆ.
ನ 22 ಭಾನುವಾರ ಮುಂಜಾನೆ ವೇಳೆ ಆಲಡ್ಕ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ದಫನ ಕಾರ್ಯ ನೆರವೇರಿಸಲಾಗುವುದು ಎಂದು ಕುಟುಂಬಿಕರು ತಿಳಿಸಿದ್ದಾರೆ. ಮೃತರು ನಾಲ್ವರು ಪುತ್ರರು, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.













0 comments:
Post a Comment