ಅಕ್ರಮ ಮರಳುಗಾರಿಕೆ, ಅಕ್ರಮ ಕೆಂಪು ಕಲ್ಲು ಸಾಗಾಟದ 3 ಪ್ರತ್ಯೇಕ ಪ್ರಕರಣ ಬೇಧಿಸಿದ ವಿಟ್ಲ ಪೊಲೀಸರು - Karavali Times ಅಕ್ರಮ ಮರಳುಗಾರಿಕೆ, ಅಕ್ರಮ ಕೆಂಪು ಕಲ್ಲು ಸಾಗಾಟದ 3 ಪ್ರತ್ಯೇಕ ಪ್ರಕರಣ ಬೇಧಿಸಿದ ವಿಟ್ಲ ಪೊಲೀಸರು - Karavali Times

728x90

20 November 2026

ಅಕ್ರಮ ಮರಳುಗಾರಿಕೆ, ಅಕ್ರಮ ಕೆಂಪು ಕಲ್ಲು ಸಾಗಾಟದ 3 ಪ್ರತ್ಯೇಕ ಪ್ರಕರಣ ಬೇಧಿಸಿದ ವಿಟ್ಲ ಪೊಲೀಸರು

ಬಂಟ್ವಾಳ, ನವಂಬರ್ 20, 2026 (ಕರಾವಳಿ ಟೈಮ್ಸ್) : ಪುಣಚ ಗ್ರಾಮದ ದಂಬೆ, ಬೋಳಂತೂರು ಗ್ರಾಮದ ಕೊಕ್ಕಪುಣಿ ಹಾಗೂ ಪೆರುವಾಯಿ ಗ್ರಾಮದಲ್ಲಿ ಅಕ್ರಮ ಮರಳುಗಾರಿಕೆ ಹಾಗೂ ಅಕ್ರಮ ಕೆಂಪು ಕಲ್ಲು ಸಾಗಾಟದ ಪ್ರತ್ಯೇಕ ಪ್ರಕರಣ ಬೇಧೀಸಿರುವ ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿಕೊಂಡ ಘಟನೆ ನ 19 ರಂದು ನಡೆದಿದೆ. 

ನ 19 ರಂದು ಪುಣಚ ಗ್ರಾಮದ ದಂಬೆ ಎಂಬಲ್ಲಿರುವ ಸಾರ್ವಜನಿಕ ತೋಡಿನಲ್ಲಿ ಅಕ್ರಮ ಮರಳು ತೆಗದು ಪಿಕಪ್ ವಾಹನಕ್ಕೆ ತುಂಬಿಸಿರುತ್ತಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣಾ ಪಿಎಸ್ಸೈ ರತ್ನಕುಮಾರ್ ಅವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ  ನೋಡಿದಾಗ ಸ್ಥಳದಲ್ಲಿ ನಾಲ್ಕು ಜನರು ಹೊಳೆಯಿಂದ ಮರಳು ತೆಗೆದು ಪಿಕಪ್ ವಾಹನಕ್ಕೆ  ತುಂಬಿಸುತ್ತಿರುವುದು ಕಂಡಿಬಂದಿರುತ್ತದೆ ಅವರುಗಳನ್ನು ಹಿಡಿದು ವಿಚಾರಿಸಿದಾಗ ಪುಣಚ ಗ್ರಾಮದ ನಿವಾಸಿಗಳಾದ ವಿಶ್ವಾಸ್ ಎಚ್ (27), ಶಶಿಧರ (45) ಹಾಗೂ ಹರೀಶ್ ಅಜ್ಜಿನಡ್ಕ (35) ಮತ್ತು ಕೇಪು ಗ್ರಾಮದ ಪುಷ್ಪರಾಜ್ ಎನ್ (32) ಎಂಬುದಾಗಿ ತಿಳಿಸಿದ್ದು, ಆರೋಪಿಗಳು ಯಾವುದೇ ಪರವಾನಿಗೆ ಇಲ್ಲದೆ ಅಕ್ರಮ ಕೃತ್ಯ ಎಸಗುತ್ತಿರುವುದು ಧೃಢಪಟ್ಟ ಹಿನ್ನಲೆಯಲ್ಲಿ ಸ್ಥಳದಲ್ಲಿದ್ದ ಮರಳು ತುಂಬಿದ್ದ ಪಿಕಪ್ ವಾಹನ ಹಾಗೂ ಇತರೆ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡು ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಇನ್ನೊಂದು ಪ್ರಕರಣದಲ್ಲಿ ನ 19 ರಂದು ಮಧ್ಯಾಹ್ನ ಕೇರಳ ಕಡೆಯಿಂದ ಮಂಚಿ ಮಾರ್ಗವಾಗಿ ವೀರಕಂಭ  ಕಡೆಗೆ ಲಾರಿಯಲ್ಲಿ ಕೆಂಪು ಕಲ್ಲುಗಳನ್ನು ಅಕ್ರಮವಾಗಿ ಸಾಗಿಸುತ್ತಿರುವುದಾಗಿ ಬಂದ ಮಾಹಿತಿ ಮೇರೆಗೆ ವಿಟ್ಲ ಠಾಣಾ ಎಎಸ್ಸೈ ಜಯರಾಮ ಕೆ ಅವರು ಸಿಬ್ಬಂದಿಗಳೊಂದಿಗೆ ಬೊಳಂತೂರು ಗ್ರಾಮದ ಕೊಕ್ಕಪುಣಿ ಎಂಬಲ್ಲಿ ಲಾರಿಯನ್ನು ತಡೆದು ತಪಾಸಣೆ ನಡೆಸಿದಾಗ ಯಾವುದೇ ಪರವಾನಿಗೆ ಅಥವಾ ದಾಖಲಾತಿ ಇಲ್ಲದೇ ಕೆಂಪು ಕಲ್ಲು ಸಾಗಾಟ ಮಾಡುತ್ತಿರುವುದು ಕಂಡು ಬಂದಿದೆ. ಲಾರಿಯನ್ನು ವಶಪಡಿಸಿಕೊಂಡ ಪೊಲೀಸರು ಆರೋಪಿ ಚಾಲಕ ಮೊಹಮ್ಮದ್ ರಪೀಕ್ (62) ಹಾಗೂ ಲಾರಿ ಮಾಲಿಕ ಮೊಹಮ್ಮದ್ ಅಶ್ರಪ್ ಅವರುಗಳ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಮೂರನೇ ಪ್ರಕರಣದಲ್ಲಿ ನ 19 ರಂದು ಸಂಜೆ ವೇಳೆ ಪೆರುವಾಯಿ ಗ್ರಾಮದ ದೇವಸ್ಥಾನವೊಂದರ ಬಳಿ  ಲಾರಿಯೊಂದನ್ನು ಕೆಲವು ಜನರು ಸೇರಿ ತಡೆದು ನಿಲ್ಲಿಸಿರುವುದಾಗಿ ಮಾಹಿತಿ ಬಂದ ಮೇರೆಗೆ ಸ್ಥಳಕ್ಕೆ ಬಂದ ವಿಟ್ಲ ಪೊಲೀಸರು ಅಲ್ಲಿ ನಿಂತಿದ್ದ ಚಾಲಕನಲ್ಲಿ ವಿಚಾರಿಸಿದಾಗ ಯಾವುದೇ ಪರವಾನಿಗೆ ಅಥವಾ ದಾಖಲಾತಿಗಳು ಪಡೆಯದೇ ಅಕ್ರಮವಾಗಿ ಕಳ್ಳತನದಿಂದ ಕೆಂಪು ಕಲ್ಲು ಸಾಗಾಟ ಮಾಡುತ್ತಿರುವುದು ತಿಳಿದು ಬಂದಿದೆ. 

ಲಾರಿಯನ್ನು ಲೋಡ್ ಸಹಿತ ಸ್ವಾಧೀನಪಡಿಸಿಕೊಂಡ ಪೊಲೀಸರು ಚಾಲಕ ಮಂಜೇಶ್ವರ ಸಮೀಪದ ಬಾಯಾರು ನಿವಾಸಿ ಜನಾರ್ದನ (38) ಎಂಬಾತನ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾರಿ ಚಾಲಕ ಜನಾರ್ದನ ಅವರು ಪ್ರತಿ ದೂರು ನೀಡಿದ್ದು, ಕೆಂಪು ಕಲ್ಲು ಸಾಗಾಟದ ವೇಳೆ ಆರೋಪಿಗಳಾದ ಪರಿಚಯದ ಸತೀಶ ಮಣಿಯಾಣಿ ಮತ್ತು ಶ್ರೀನಿವಾಸ ರೈ ಎಂಬವರು ಲಾರಿಯನ್ನು ತಡೆದು, ಚಾಲಕನನ್ನು ಲಾರಿಯಿಂದ ಎಳೆದು ಹಾಕಿ ಅವಾಚ್ಯ ಶಬ್ಧಗಳಿಂದ ಬೈದು, ಹಲ್ಲೆ ನಡೆಸಿ ಬೆದರಿಕೆ ಒಡ್ಡಿರುತ್ತಾರೆ ಎಂಬುದಾಗಿ ನೀಡಿದ ದೂರಿನಂತೆ ಈ ಬಗ್ಗೆ ವಿಟ್ಲ ಪೆÇಲೀಸ್ ಠಾಣೆಯಲ್ಲಿ ಪ್ರತಿ ದೂರು ದಾಖಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಅಕ್ರಮ ಮರಳುಗಾರಿಕೆ, ಅಕ್ರಮ ಕೆಂಪು ಕಲ್ಲು ಸಾಗಾಟದ 3 ಪ್ರತ್ಯೇಕ ಪ್ರಕರಣ ಬೇಧಿಸಿದ ವಿಟ್ಲ ಪೊಲೀಸರು Rating: 5 Reviewed By: karavali Times
Scroll to Top