ಸುಳ್ಯ (ಕರಾವಳಿ ಟೈಮ್ಸ್) : ಜಿಲ್ಲೆಯಲ್ಲಿ ಲಾಕ್ ಡೌನ್ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ವಾಹನ ಸಿಗದೇ ವೃದ್ಧೆಯೋರ್ವರು ಔಷಧಿ ಖರೀದಿಸಲು ಸುಳ್ಯದ ಕೊಲ್ಲಮೊಗ್ರದಿಂದ ಸುಮಾರು 15 ಕಿಮೀ ದೂರದ ಗುತ್ತಿಗಾರಿಗೆ ನಡೆದುಕೊಂಡೇ ಬಂದ ಘಟನೆ ವರದಿಯಾಾಗಿದ.
ಗುತ್ತಿಗಾರಿಗೆ ಆಗಮಿಸಿದಾಗ ಬಹಳ ಸುಸ್ತಾದ ಅಜ್ಜಿಯನ್ನು ಗಮನಿಸಿದ ಸಾರ್ವಜನಿಕರು ವಿಚಾರಿಸಿದಾಗ ತಾನು ಮನೆಯಿಂದ ಔಷಧಿ ಖರೀದಿಗೆ ನಡೆದುಕೊಂಡು ಬಂದ ವಿಚಾರ ತಿಳಿಸಿದ್ದಾರೆ. ತಕ್ಷಣವೇ ಗ್ರಾಮ ಪಂಚಾಯತ್ ಅಧ್ಯಕ್ಷ ಅಚ್ಚುತ್ತ ಗುತ್ತಿಗಾರು, ಪಿಡಿಓ ಶ್ಯಾಮಪ್ರಸಾದ್ ಹಾಗೂ ಸ್ಥಳೀಯ ಪೋಲೀಸರ ನೆರವಿನೊಂದಿಗೆ ಔಷಧಿಯ ವ್ಯವಸ್ಥೆ ಮಾಡಿ ಖಾಸಗಿ ವಾಹನದಲ್ಲಿ ಮನೆಗೆ ತಲುಪಿಸಿದ್ದಾರೆ.
0 comments:
Post a Comment