ಬಂಟ್ವಾಳ, ಡಿ. 10, 2020 (ಕರಾವಳಿ ಟೈಮ್ಸ್) : ಎಸ್ಕೆಎಸ್ಸೆಸ್ಸೆಫ್ ಆಲಡ್ಕ ಶಾಖಾ ವತಿಯಿಂದ ಶಂಸುಲ್ ಉಲಮಾ (ಖ.ಸಿ) ಹಾಗೂ ಅಗಲಿದ ಸಮಸ್ತ ನೇತಾರರ ಅನುಸ್ಮರಣಾ ಸಂಗಮ ಡಿಸೆಂಬರ್ 13 ರಂದು ಭಾನುವಾರ ರಾತ್ರಿ 8 ಗಂಟೆಗೆ ಇಲ್ಲಿನ ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಕಛೇರಿಯಲ್ಲಿ ನಡೆಯಲಿದೆ.
ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ವಲಯಾಧ್ಯಕ್ಷ ಇರ್ಶಾದ್ ದಾರಿಮಿ ಅಲ್-ಅಜಝರಿ ದುವಾ ನೆರವೇರಿಸಲಿದ್ದು, ಶಾಖಾಧ್ಯಕ್ಷ ಮುಹಮ್ಮದ್ ಹನೀಫ್ ಹಾಸ್ಕೋ ಅಧ್ಯಕ್ಷತೆ ವಹಿಸುವರು. ಖಲೀಲ್ ದಾರಿಮಿ ಉದ್ಘಾಟಿಸುವರು. ಪಾಣೆಮಂಗಳೂರು ಕ್ಲಸ್ಟರ್ ಅಧ್ಯಕ್ಷ ಅಬೂಸ್ವಾಲಿಹ್ ಫೈಝಿ ಅನುಸ್ಮರಣಾ ಭಾಷಣಗೈಯುವರು.
ಪ್ರಮುಖರಾದ ಅಬ್ದುಲ್ ಬಶೀರ್ ಎನ್., ಅಬ್ದುಲ್ ಖಾದರ್ ಮದನಿ, ಅಬೂಬಕರ್ ಮದನಿ, ಹನೀಫ್ ಯಮಾನಿ, ಅಬ್ದುಲ್ಲಾಹ್ ರಬ್ಬಾನಿ, ಅಬ್ದುಲ್ ಅಝೀಝ್ ಪಿ.ಐ. ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
0 comments:
Post a Comment