ಶಾಲಾರಂಭ : ವಿದ್ಯಾರ್ಥಿ ಬಸ್ ಪಾಸ್ ಗಳ ಅವಧಿ ಜೂನ್ 15ರವರೆಗೆ ವಿಸ್ತರಿಸಿ ಕೆ.ಎಸ್.ಆರ್.ಟಿ.ಸಿ. ಆದೇಶ - Karavali Times ಶಾಲಾರಂಭ : ವಿದ್ಯಾರ್ಥಿ ಬಸ್ ಪಾಸ್ ಗಳ ಅವಧಿ ಜೂನ್ 15ರವರೆಗೆ ವಿಸ್ತರಿಸಿ ಕೆ.ಎಸ್.ಆರ್.ಟಿ.ಸಿ. ಆದೇಶ - Karavali Times

728x90

31 May 2023

ಶಾಲಾರಂಭ : ವಿದ್ಯಾರ್ಥಿ ಬಸ್ ಪಾಸ್ ಗಳ ಅವಧಿ ಜೂನ್ 15ರವರೆಗೆ ವಿಸ್ತರಿಸಿ ಕೆ.ಎಸ್.ಆರ್.ಟಿ.ಸಿ. ಆದೇಶ

ಬೆಂಗಳೂರು, ಮೇ 31, 2023 (ಕರಾವಳಿ ಟೈಮ್ಸ್) : ರಾಜ್ಯದಲ್ಲಿ ಮೇ 31 ರಿಂದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಪುನರಾರಂಭಗೊಂಡಿದ್ದು, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಹಳೆ ಬಸ್ ಪಾಸ್ ಅವಧಿಯನ್ನು ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. 

2023-24ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿಯಂತೆ ಮೇ 31 ರಿಂದ ರಾಜ್ಯದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಆರಂಭವಾಗಿವೆ. ಈ ಹಿನ್ನಲೆಯಲ್ಲಿ ಕೆಎಸ್‍ಆರ್‍ಟಿಸಿ, ವಿದ್ಯಾರ್ಥಿಗಳ ಹಳೆಯ ಬಸ್ ಪಾಸ್ ಅವಧಿ ವಿಸ್ತರಿಸಿದ್ದು, ಜೂನ್ 15 ರವರೆಗೆ ಹಳೆಯ ಬಸ್ ಪಾಸ್ ಗಳನ್ನು ಮಾನ್ಯ ಮಾಡಿದ್ದು, ಅದನ್ನೇ ಬಳಸುವಂತೆ ಕೆಎಸ್‍ಆರ್‍ಟಿಸಿ ಆದೇಶ ಹೊರಡಿಸಿದೆ. ಇದು ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಅನ್ವಯವಾಗಲಿದೆ.

ನಿಗಮವು ಪ್ರತಿ ವರ್ಷದಂತೆ 2023-24ನೇ ಸಾಲಿನ ವಿದ್ಯಾರ್ಥಿ ಉಚಿತ / ರಿಯಾಯಿತಿ ಬಸ್ ಪಾಸುಗಳನ್ನು ಇಡಿಸಿಎಸ್ ಇಲಾಖೆಯ ಸೇವಾಸಿಂಧು ತಂತ್ರಾಂಶದ ಮುಖಾಂತರ ಸಂಪೂರ್ಣ ಸಂಪೂರ್ಣ ಯಾಂತ್ರೀಕೃತವಾಗಿ ವಿತರಣೆ ಮಾಡಲು ಕ್ರಮವಹಿಸಲಾಗುತ್ತಿದ್ದು, ಇಡಿಸಿಎಸ್ ಇಲಾಖೆಯು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

ವಿದ್ಯಾರ್ಥಿಗಳು ಆನ್‍ಲೈನ್ ನಲ್ಲಿ ಅರ್ಜಿ ಸಲ್ಲಿಕೆಗೆ ಹಾಗೂ ಪಾಸು ಪಡೆಯಲು ಕಾಲಾವಕಾಶ ನೀಡಬೇಕಿರುತ್ತದೆ. ಜೊತೆಗೆ ವಿದ್ಯಾರ್ಥಿಗಳ ಶೈಕ್ಷಣಿಕ ತರಗತಿಗಳಿಗೆ ಹಾಜರಾಗಲು ಯಾವುದೇ ಅನಾನುಕೂಲವಾಗದಂತೆ ಕ್ರಮವಹಿಸಬೇಕಿರುತ್ತದೆ. ಈ ಸಂಬಂಧ ವಿದ್ಯಾರ್ಥಿಗಳಿಗೆ ಜೂನ್ 15ರವರೆಗೆ ವಿದ್ಯಾರ್ಥಿಗಳು ಈ ವರ್ಷದ ಶಾಲಾ-ಕಾಲೇಜು ಶುಲ್ಕ ರಶೀದಿ ಅಥವಾ 2022-23ನೇ ಸಾಲಿನ ಹಳೆಯ ಬಸ್ ಪಾಸುಗಳನ್ನು ನಿಗಮದ ಬಸ್ಸುಗಳಲ್ಲಿ ತೋರಿಸಿ ನಿಗಮದ ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ ಎಂದು ಕೆಎಸ್‍ಆರ್‍ಟಿಸಿ ಪ್ರಕಟಣೆ ತಿಳಿಸಿದೆ.

  • Blogger Comments
  • Facebook Comments

0 comments:

Post a Comment

Item Reviewed: ಶಾಲಾರಂಭ : ವಿದ್ಯಾರ್ಥಿ ಬಸ್ ಪಾಸ್ ಗಳ ಅವಧಿ ಜೂನ್ 15ರವರೆಗೆ ವಿಸ್ತರಿಸಿ ಕೆ.ಎಸ್.ಆರ್.ಟಿ.ಸಿ. ಆದೇಶ Rating: 5 Reviewed By: karavali Times
Scroll to Top