ಬಂಟ್ವಾಳದಲ್ಲಿ ಮಳೆಯಬ್ಬರದಿಂದ ಹಲವು ಮನೆಗಳಿಗೆ ಹಾನಿ - Karavali Times ಬಂಟ್ವಾಳದಲ್ಲಿ ಮಳೆಯಬ್ಬರದಿಂದ ಹಲವು ಮನೆಗಳಿಗೆ ಹಾನಿ - Karavali Times

728x90

30 September 2023

ಬಂಟ್ವಾಳದಲ್ಲಿ ಮಳೆಯಬ್ಬರದಿಂದ ಹಲವು ಮನೆಗಳಿಗೆ ಹಾನಿ

ಬಂಟ್ವಾಳ, ಸೆಪ್ಟೆಂಬರ್ 30, 2023 (ಕರಾವಳಿ ಟೈಮ್ಸ್) : ತಾಲೂಕಿನಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಹಾಳಿಗೆ ಕೆಲವೆಡೆ ಮನೆಗಳಿಗೆ ಹಾನಿ ಸಂಭವಿಸಿದ ಘಟನೆ ನಡೆದಿದೆ. 

ಬಂಟ್ವಾಳ ಕಸಬಾ ಗ್ರಾಮದ ಮಣಿಹಳ್ಳ ಎಂಬಲ್ಲಿ ಬಿರುಗಾಳಿ ಹಾಗೂ ಮಳೆಗೆ ಭವಾನಿ ಕೋಂ ವಾಸು ಮೂಲ್ಯ, ಶ್ರೀಮತಿ ಕೋಂ ದಿವಾಕರ ಆಚಾರಿ, ಪೂರ್ಣಿಮಾ ಕೋಂ ಶೇಖರ, ಗುಲಾಬಿ ಕೋಂ ಆನಂದ, ಗುಲಾಬಿ ಕೋಂ ಸುಧಾಕರ, ಲಕ್ಷ್ಮಣ ಬಿನ್ ಅಣ್ಣ ಮೂಲ್ಯ ಅವರುಗಳ ಮನೆಗಳ ಹಂಚು ಮೇಲ್ಛಾವಣಿಗೆ ಬಾಗಶ ಹಾನಿ ಸಂಭವಿಸಿದೆ. 

ಬರಿಮಾರು ನಿವಾಸಿ ಗುರುಪ್ರಸಾದ್ ಬಲ್ಯ ಅವರ ವಾಸ್ತವ್ಯದ ಮನೆಯ ಮೇಲ್ಛಾವಣಿ ಬಾಗಶಃ ಹಾನಿಗೊಂಡಿದೆ ಎಂದು ತಾಲೂಕು ಕಚೇರಿ ಮಾಹಿತಿ ತಿಳಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳದಲ್ಲಿ ಮಳೆಯಬ್ಬರದಿಂದ ಹಲವು ಮನೆಗಳಿಗೆ ಹಾನಿ Rating: 5 Reviewed By: karavali Times
Scroll to Top