ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆ - Karavali Times ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆ - Karavali Times

728x90

2 October 2023

ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆ

ಬಂಟ್ವಾಳ, ಅಕ್ಟೋಬರ್ 02, 2023 (ಕರಾವಳಿ ಟೈಮ್ಸ್) : ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ 154ನೇ ಜನ್ಮ ದಿನಾಚರಣೆ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದೂರ್ ಶಾಸ್ತ್ರಿ ಅವರ ಹುಟ್ಟು ಹಬ್ಬವನ್ನು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಬಂಟ್ವಾಳ ಪೇಟೆಯ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಆಚರಿಸಲಾಯಿತು. 

ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೆಪಿಸಿಸಿ ಸದಸ್ಯ ಪಿಯೂಸ್ ಎಲ್ ರೋಡ್ರಿಗಸ್, ಪಕ್ಷ ಪ್ರಮುಖರಾದ ವಿಶ್ವನಾಥ ಗೌಡ ಮಣಿ, ಜಗನ್ನಾಥ ಬಂಟ್ವಾಳ, ಸುರೇಶ್ ಪೂಜಾರಿ ಜೋರ, ಮನೋಹರ್ ಕುಲಾಲ್ ನೇರಂಬೋಳ್, ವೆಂಕಪ್ಪ ಪೂಜಾರಿ, ಅಣ್ಣು ಖಂಡಿಗ, ಚಂದ್ರಹಾಸ ನಾಯ್ಕ ಸರಪಾಡಿ, ಲವೀನಾ ವಿಲ್ಮ ಮೋರಸ್, ಮಲ್ಲಿಕಾ ವಿ ಶೆಟ್ಟಿ, ವಲಾರ್ ಬಡ್ಡಕಟ್ಟೆ, ಚಂದ್ರಶೇಖರ್ ಆಚಾರ್ಯ ಕೊೈಲ, ಪುರುಷೋತ್ತಮ ಪೂಜಾರಿ ಮಂಡಾಡಿ, ದಿವಾಕರ ಚೆಂಡ್ತಿಮಾರ್, ಶ್ರೀನಿವಾಸ ಶೆಟ್ಟಿ ದೈವಗುಡ್ಡೆ, ಹೊನ್ನಯ್ಯ ಸುವರ್ಣ, ಜಗದೀಶ್ ಬಡ್ಡಕಟ್ಟೆ, ನಾಸೀರ್ ಕೆಳಗಿನಪೇಟೆ, ಅಮ್ಮು ಅರ್ಬಿಗುಡ್ಡೆ, ಲೋಕೇಶ್ ಕೃಷ್ಣಾಪುರ, ರಿಯಾಝ್ ಕೆಳಗಿನಪೇಟೆ, ರಾಮಣ್ಣ ಪೂಜಾರಿ ಅಮ್ಟಾಡಿ, ಗಣೇಶ್ ಪೂಜಾರಿ ನೇರಂಬೋಳ್, ಶಬೀರ್ ಕುಕ್ಕಿಪಾಡಿ, ಫಾರೂಕ್ ನಾವೂರ, ಭಾರತಿ ರಾಜೇಂದ್ರ ಪೂಜಾರಿ ಮೊದಲಾದವರು ಭಾಗವಹಿಸಿದ್ದರು. 

ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಾಬಲ ಬಂಗೇರ ಸ್ವಾಗತಿಸಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಾಸು ಪೂಜಾರಿ ಲೊರೆಟ್ಟೋ ವಂದಿಸಿದರು. 

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆ Rating: 5 Reviewed By: karavali Times
Scroll to Top