ಬಂಟ್ವಾಳ : ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ತಂದೆ-ಮಗ ಆಸ್ಪತ್ರೆಗೆ - Karavali Times ಬಂಟ್ವಾಳ : ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ತಂದೆ-ಮಗ ಆಸ್ಪತ್ರೆಗೆ - Karavali Times

728x90

19 February 2024

ಬಂಟ್ವಾಳ : ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ತಂದೆ-ಮಗ ಆಸ್ಪತ್ರೆಗೆ

ಬಂಟ್ವಾಳ, ಫೆಬ್ರವರಿ 19, 2024 (ಕರಾವಳಿ ಟೈಮ್ಸ್) : ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ತಂದೆ-ಮಗ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಪಿಲಿಮೊಗ್ರು ಗ್ರಾಮದ ಓಮ ಸಂಕದ ಬಳಿ ಭಾನುವಾರ ಸಂಭವಿಸಿದೆ. 

ಗಾಯಾಳು ಬೈಕ್ ಸವಾರರನ್ನು ಸ್ಥಳೀಯ ನಿವಾಸಿ ಕೇಶವ ಸಪಲ್ಯ (48) ಹಾಗೂ ಅವರ ಪುತ್ರ ಯಶ್ಮಿತ್ ಎಂದು ಗುರುತಿಸಲಾಗಿದೆ. ಕೇಶವ ಅವರು ಪುತ್ರನನ್ನು ಕುಳ್ಳರಿಸಿಕೊಂಡು ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಓಮ ಸಂಕದ ಬಳಿ ಜಯಪ್ರಕಾಶ್ ಎಂಬವರು ಚಲಾಯಿಸುತ್ತಿದ್ದ ಕಾರು ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. 

ಅಪಘಾತದ ತೀವ್ರತೆಗೆ ತಂದೆ-ಮಗ ಬೈಕ್ ಸಮೇತ ರಸ್ತೆಗೆಸೆಯಲ್ಪಟ್ಟು ಗಾಯಗೊಂಡವರನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಎ ಜೆ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ : ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ತಂದೆ-ಮಗ ಆಸ್ಪತ್ರೆಗೆ Rating: 5 Reviewed By: karavali Times
Scroll to Top