ಮಾರಿಪಳ್ಳ : ಕ್ಯಾಂಟೀನಿನಲ್ಲಿ ಜ್ಯೂಸ್ ಕುಡಿಯುತ್ತಿದ್ದವನಿಗೆ ಬೈದು ಜೀವ ಬೆದರಿಕೆ ಒಡ್ಡಿದ ವ್ಯಕ್ತಿ - Karavali Times ಮಾರಿಪಳ್ಳ : ಕ್ಯಾಂಟೀನಿನಲ್ಲಿ ಜ್ಯೂಸ್ ಕುಡಿಯುತ್ತಿದ್ದವನಿಗೆ ಬೈದು ಜೀವ ಬೆದರಿಕೆ ಒಡ್ಡಿದ ವ್ಯಕ್ತಿ - Karavali Times

728x90

19 February 2024

ಮಾರಿಪಳ್ಳ : ಕ್ಯಾಂಟೀನಿನಲ್ಲಿ ಜ್ಯೂಸ್ ಕುಡಿಯುತ್ತಿದ್ದವನಿಗೆ ಬೈದು ಜೀವ ಬೆದರಿಕೆ ಒಡ್ಡಿದ ವ್ಯಕ್ತಿ

ಬಂಟ್ವಾಳ, ಫೆಬ್ರವರಿ 19, 2024 (ಕರಾವಳಿ ಟೈಮ್ಸ್) : ಕ್ಯಾಂಟೀನಿನಲ್ಲಿ ಜ್ಯೂಸ್ ಕುಡಿಯುತ್ತಿದ್ದವನಿಗೆ ವ್ಯಕ್ತಿಯೋರ್ವರು ಅವಾಚ್ಯವಾಗಿ ಬೈದು ಜೀವಬೆದರಿಕೆ ಒಡ್ಡಿದ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಪುದು ಗ್ರಾಮದ ನಿವಾಸಿ ಅಬ್ದುಲ್ ಸಮದ್ (38) ಅವರು ಮಾರಿಪಳ್ಳ-10ನೇ ಮೈಲಿಕಲ್ಲು ಎಂಬಲ್ಲಿ ಕ್ಯಾಂಟೀನಿನಲ್ಲಿ ಜ್ಯೂಸ್ ಕುಡಿಯುತ್ತಿದ್ದ ವೇಳೆ ಆರೋಪಿ ಕುಂಜತ್ಕಲ ನಿವಾಸಿ ಅಬ್ದುಲ್ ರಜಾಕ್ ಅವರ ಪುತ್ರ ರಿಜ್ವಾನ್ ಎಂಬಾತ ಬಂದು ಅವ್ಯಾಚವಾಗಿ ಬೈದು, ಜೀವ ಬೆದರಿಕೆ ಹಾಕಿರುತ್ತಾನೆ ಎಂದು ನೀಡಿದ ದೂರಿನ ಮೇರೆಗೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಮಾರಿಪಳ್ಳ : ಕ್ಯಾಂಟೀನಿನಲ್ಲಿ ಜ್ಯೂಸ್ ಕುಡಿಯುತ್ತಿದ್ದವನಿಗೆ ಬೈದು ಜೀವ ಬೆದರಿಕೆ ಒಡ್ಡಿದ ವ್ಯಕ್ತಿ Rating: 5 Reviewed By: karavali Times
Scroll to Top