ಫರಂಗಿಪೇಟೆ : ಬೈಕ್ ನಿಲ್ಲಿಸಿ ಜಾತ್ರೆಗೆ ಹೋಗಿ ಬರುವಷ್ಟರಲ್ಲಿ ಬೈಕ್ ಕಾಣೆ - Karavali Times ಫರಂಗಿಪೇಟೆ : ಬೈಕ್ ನಿಲ್ಲಿಸಿ ಜಾತ್ರೆಗೆ ಹೋಗಿ ಬರುವಷ್ಟರಲ್ಲಿ ಬೈಕ್ ಕಾಣೆ - Karavali Times

728x90

19 February 2024

ಫರಂಗಿಪೇಟೆ : ಬೈಕ್ ನಿಲ್ಲಿಸಿ ಜಾತ್ರೆಗೆ ಹೋಗಿ ಬರುವಷ್ಟರಲ್ಲಿ ಬೈಕ್ ಕಾಣೆ

ಬಂಟ್ವಾಳ, ಫೆಬ್ರವರಿ 19, 2024 (ಕರಾವಳಿ ಟೈಮ್ಸ್) : ಫರಂಗಿಪೇಟೆ ದೇವಸ್ಥಾನದ ಬಳಿ ಬೈಕ್ ನಿಲ್ಲಿಸಿ ಜಾತ್ರೆಗೆ ಹೋಗಿ ಬರುವಷ್ಟರಲ್ಲಿ ಬೈಕ್ ಕಳವಾದ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಫರಂಗಿಪೇಟೆ ಸಮೀಪದ ತೆಕಿಹಿತ್ಲು ನಿವಾಸಿ ಚಂದ್ರಶೇಖರ (53) ಅವರು ಫೆ 15 ರಂದು ಸಂಜೆ ತನ್ನ ಬೈಕನ್ನು ಪುದು ಗ್ರಾಮದ ಫರಂಗಿಪೇಟೆಯ ವರದೇಶ್ವರ ದೇವಸ್ಥಾನದ ಬಳಿ ರಸ್ತೆ ಬದಿ ನಿಲ್ಲಿಸಿ ದೇವಸ್ಥಾನದ ಜಾತ್ರೆಗೆ ತೆರಳಿದ್ದರು. ಜಾತ್ರೆ ಮುಗಿಸಿ ರಾತ್ರಿ ವೇಳೆ ವಾಪಾಸು ಬಂದಾಗ ಬೈಕ್ ಕಾಣೆಯಾಗಿರುತ್ತದೆ. ಕಳವಾದ ಬೈಕಿನ ಮೌಲ್ಯ ಸುಮಾರು 15 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಫರಂಗಿಪೇಟೆ : ಬೈಕ್ ನಿಲ್ಲಿಸಿ ಜಾತ್ರೆಗೆ ಹೋಗಿ ಬರುವಷ್ಟರಲ್ಲಿ ಬೈಕ್ ಕಾಣೆ Rating: 5 Reviewed By: karavali Times
Scroll to Top