ಬೆಳ್ತಂಗಡಿ : ರಸ್ತೆ ಬದಿಯ ಮೋರಿಯ ದಂಡೆಗೆ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಪಾಟ್ ಡೆತ್ - Karavali Times ಬೆಳ್ತಂಗಡಿ : ರಸ್ತೆ ಬದಿಯ ಮೋರಿಯ ದಂಡೆಗೆ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಪಾಟ್ ಡೆತ್ - Karavali Times

728x90

4 March 2024

ಬೆಳ್ತಂಗಡಿ : ರಸ್ತೆ ಬದಿಯ ಮೋರಿಯ ದಂಡೆಗೆ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಪಾಟ್ ಡೆತ್

ಬೆಳ್ತಂಗಡಿ, ಮಾರ್ಚ್ 04, 2024 (ಕರಾವಳಿ ಟೈಮ್ಸ್) : ಚಾಲಕನ ನಿಯಂತ್ರಣ ತಪ್ಪಿದ ಬೈಕ್ ರಸ್ತೆ ಬದಿಯ ಮೋರಿಯ ದಂಡೆಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸಮೇತ ಚರಂಡಿಗೆ ಬಿದ್ದು ಸವಾರ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಇಂದಬೆಟ್ಟು ಗ್ರಾಮದ ಕುತ್ರೋಟ್ಟು ಎಂಬಲ್ಲಿ ಭಾನುವಾರ ರಾತ್ರಿ ವೇಳೆ ನಡೆದಿದೆ. 

ಮೃತ ಬೈಕ್ ಸವಾರನನ್ನು ಜೋಷನ್ ಎಂದು ಹೆಸರಿಸಲಾಗಿದೆ. ಈತ ಸವಾರಿ ಮಾಡುತ್ತಿದ್ದ ಬೈಕ್ ನಿಯಂತ್ರಣ ಮೀರಿ ಕುತೋಟ್ಟು ಎಂಬಲ್ಲಿ ರಸ್ತೆ ಬದಿಯ ಮೋರಿಯ ದಂಡೆಗೆ ಡಿಕ್ಕಿ ಹೊಡೆದು ಬಳಿಕ ಬೈಕ್ ಸಮೇತವಾಗಿ ಚರಂಡಿಗೆ ಬಿದ್ದಿರುತ್ತಾನೆ. ಅಪಘಾತದಿಂದ ಗಂಭೀರ ಗಾಯಗೊಂಡ ಜೋಷನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಬಗ್ಗೆ ಎಂ ಜೆ ಜೋಸೆಫ್ ಎಂಬವರು ನೀಡಿದ ದೂರಿನಂತೆ ಬೆಳ್ತಂಗಡಿ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಬೆಳ್ತಂಗಡಿ : ರಸ್ತೆ ಬದಿಯ ಮೋರಿಯ ದಂಡೆಗೆ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಪಾಟ್ ಡೆತ್ Rating: 5 Reviewed By: karavali Times
Scroll to Top