ಮನೆ ಕಂಪೌಂಡ್ ಕೆಡವುತ್ತಿರುವ ಬಗ್ಗೆ ಪ್ರಶ್ನಿಸಿದ ಮಾಲಕಿಗೆ ಹಲ್ಲೆ : ಕಡಬ ಠಾಣೆಯಲ್ಲಿ ಪ್ರಕರಣ ದಾಖಲು - Karavali Times ಮನೆ ಕಂಪೌಂಡ್ ಕೆಡವುತ್ತಿರುವ ಬಗ್ಗೆ ಪ್ರಶ್ನಿಸಿದ ಮಾಲಕಿಗೆ ಹಲ್ಲೆ : ಕಡಬ ಠಾಣೆಯಲ್ಲಿ ಪ್ರಕರಣ ದಾಖಲು - Karavali Times

728x90

11 March 2024

ಮನೆ ಕಂಪೌಂಡ್ ಕೆಡವುತ್ತಿರುವ ಬಗ್ಗೆ ಪ್ರಶ್ನಿಸಿದ ಮಾಲಕಿಗೆ ಹಲ್ಲೆ : ಕಡಬ ಠಾಣೆಯಲ್ಲಿ ಪ್ರಕರಣ ದಾಖಲು

ಕಡಬ, ಮಾರ್ಚ್ 11, 2024 (ಕರಾವಳಿ ಟೈಮ್ಸ್) : ಮನೆಯ ಕಂಪೌಂಡ್ ಅಕ್ರಮವಾಗಿ ಕೆಡವುತ್ತಿರುವ ಬಗ್ಗೆ ಆಕ್ಷೇಪಿಸಿ ಮನೆ ಮಾಲಕಿಗೆ ಹಲ್ಲೆ ನಡೆಸಿದ ಘಟನೆ ಕಡಬ ತಾಲೂಕು, ಕೊಂಬಾರು ಗ್ರಾಮದಲ್ಲಿ ಭಾನುವಾರ ನಡೆದಿದೆ. 

ಹಲ್ಲೆಯಿಂದ ಗಾಯಗೊಂಡ ಮನೆ ಮಾಲಕಿಯನ್ನು ಇಲ್ಲಿನ ನಿವಾಸಿ ಗಂಗಮ್ಮ (72) ಎಂದು ಹೆಸರಿಸಲಾಗಿದ್ದು, ಹಲ್ಲೆ ನಡೆಸಿದ ಆರೋಪಿಯನ್ನು ನೆರೆಕರೆ ನಿವಾಸಿ, ಸಂಬಂಧಿ ಶಶಿಧರ ಎಂದು ಗುರುತಿಸಲಾಗಿದೆ. 

ಗಂಗಮ್ಮ ಅವರು ಭಾನುವಾರ ಬೆಳಿಗ್ಗೆ ಒಬ್ಬರೆ ಮನೆಯಲ್ಲಿದ್ದ ವೇಳೆ ನೆರೆಕೆರೆಯ ಸಂಬಂಧಿ ಆರೋಪಿ ಶಶಿಧರ ಎಂಬಾತ ಮನೆಯ  ಕೌಂಪೌಂಡನ್ನು ಜೆಸಿಬಿ ಯಂತ್ರದ ಮೂಲಕ ಕೆಡವುತ್ತಿರುವುದನ್ನು ನೋಡಿ ಗಂಗಮ್ಮ ಅಕ್ಷೇಪಿಸಿದ್ದಾರೆ. ಈ ವೇಳೆ ಆರೋಪಿ ಅವ್ಯಾಚವಾಗಿ ಬೈದು, ಹಲ್ಲೆ ನಡೆಸಿರುತ್ತಾನೆ. ಹಲ್ಲೆಯಿಂದ ಗಾಯಗೊಂಡ ಗಂಗಮ್ಮ ಅವರನ್ನು ಚಿಕಿತ್ಸೆಗಾಗಿ ಕಡಬ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಕಡಬ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 34/2024 ಕಲಂ 447, 427, 323, 504 ಐಪಿಸಿಯಂತೆ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಮನೆ ಕಂಪೌಂಡ್ ಕೆಡವುತ್ತಿರುವ ಬಗ್ಗೆ ಪ್ರಶ್ನಿಸಿದ ಮಾಲಕಿಗೆ ಹಲ್ಲೆ : ಕಡಬ ಠಾಣೆಯಲ್ಲಿ ಪ್ರಕರಣ ದಾಖಲು Rating: 5 Reviewed By: karavali Times
Scroll to Top