ಅಮ್ಟಾಡಿ : ಗ್ಯಾರೇಜ್ ಬಳಿ ನಿಲ್ಲಿಸಿದ್ದ ಸ್ಕೂಟರ್ ಕಳವು, ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲು - Karavali Times ಅಮ್ಟಾಡಿ : ಗ್ಯಾರೇಜ್ ಬಳಿ ನಿಲ್ಲಿಸಿದ್ದ ಸ್ಕೂಟರ್ ಕಳವು, ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲು - Karavali Times

728x90

15 March 2024

ಅಮ್ಟಾಡಿ : ಗ್ಯಾರೇಜ್ ಬಳಿ ನಿಲ್ಲಿಸಿದ್ದ ಸ್ಕೂಟರ್ ಕಳವು, ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲು

ಬಂಟ್ವಾಳ, ಮಾರ್ಚ್ 15, 2024 (ಕರಾವಳಿ ಟೈಮ್ಸ್) : ಗ್ಯಾರೇಜ್ ಬಳಿ ನಿಲ್ಲಿಸಲಾಗಿದ್ದ ಸ್ಕೂಟರ್ ಕಳವಾದ ಘಟನೆ ಅಮ್ಟಾಡಿ ಗ್ರಾಮದ ಜೈದುರ್ಗ ಗ್ಯಾರೇಜ್ ಬಳಿ ನಡೆದಿದೆ. 

ಇಲ್ಲಿನ ನಿವಾಸಿ ಸುರೇಶ್ (37) ಎಂಬವರಿಗೆ ಶೇರಿದ ಆಕ್ಸಿಸ್ ಸ್ಕೂಟರ್ ಕಳವಾಗಿದೆ. ಇವರು ತನ್ನ   ಎಕ್ಸಿಸ್ ಸ್ಕೂಟರನ್ನು ಮಾ 12 ರಂದು ಸಂಜೆ ಅಮ್ಟಾಡಿ ಗ್ರಾಮದ ಜೈದುರ್ಗ ಗ್ಯಾರೆಜ್ ಬಳಿ ನಿಲ್ಲಿಸಿ ಮನೆಗೆ ಹೋಗಿದ್ದು, ಮರುದಿನ ಬೆಳಿಗ್ಗೆ ಬಂದು ನೋಡಿದಾಗ ಸ್ಕೂಟರ್ ಕಳವಾಗಿರುವುದು ಬೆಳಕಿಗೆ ಬಂದಿದೆ. ಕಳವಾದ ಸ್ಕೂಟರ್ ಮೌಲ್ಯ 45 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬಂಟ್ವಾಲ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಅಮ್ಟಾಡಿ : ಗ್ಯಾರೇಜ್ ಬಳಿ ನಿಲ್ಲಿಸಿದ್ದ ಸ್ಕೂಟರ್ ಕಳವು, ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲು Rating: 5 Reviewed By: karavali Times
Scroll to Top