ಸುಳ್ಯ : ಮನೆಯ ಕಿಟಕಿ ಸರಳು ಮುರಿದು ಒಳನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಎಗರಿಸಿದ ಕಳ್ಳರು - Karavali Times ಸುಳ್ಯ : ಮನೆಯ ಕಿಟಕಿ ಸರಳು ಮುರಿದು ಒಳನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಎಗರಿಸಿದ ಕಳ್ಳರು - Karavali Times

728x90

7 March 2024

ಸುಳ್ಯ : ಮನೆಯ ಕಿಟಕಿ ಸರಳು ಮುರಿದು ಒಳನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಎಗರಿಸಿದ ಕಳ್ಳರು

ಸುಳ್ಯ, ಮಾರ್ಚ್ 07, 2024 (ಕರಾವಳಿ ಟೈಮ್ಸ್) : ಕಿಟಕಿಯ ಸರಳು ಮುರಿದು ಮನೆಯೊಳಗೆ ಪ್ರವೇಶಿಸಿದ ಕಳ್ಳರು ಬೆಡ್ ರೂಮಿನ ಕಪಾಟಿನಲ್ಲಿದ್ದ ಚಿನ್ನಾಭರಣ ಕಳವುಗೈದ ಘಟನೆ ಸುಳ್ಯ ತಾಲೂಕಿನ ಕೊಡಿಯಾಲ ಗ್ರಾಮದ ಮೂವಪ್ಪೆ ಎಂಬಲ್ಲಿ ಬುಧವಾರ ಸಂಜೆ ಬೆಳಕಿಗೆ ಬಂದಿದೆ. 

ಕೊಡಿಯಾಲ ಗ್ರಾಮದ ಮೂವಪ್ಪೆ ಎಂಬಲ್ಲಿನ ನಿವಾಸಿ ನಸೀರ ಐ ಎಚ್ (28) ಎಂಬವರ ಮನೆಯಲ್ಲಿ ಈ ಕಳವು ಕೃತ್ಯ ನಡೆದಿದೆ. ನಸೀರ ಅವರು ತನ್ನ ಮನೆಯಿಂದ ಮಾ 3 ರಂದು ಬೆಳಿಗ್ಗೆ ಇಂದ್ರಾಜೆಗೆ ಹೋಗಿದ್ದು, ಮಾ 6 ರಂದು ಸಂಜೆ ಮನೆಗೆ ಬಂದಾಗ, ಬೆಡ್ ರೂಮಿನ ಬಾಗಿಲು ಒಳಗಡೆಯಿಂದ ಚಿಲಕ ಹಾಕಿರುವುದು ಕಂಡು ಬಂದಿದೆ. ಇದರಿಂದ ಸಂಶಯಗೊಂಡ ಅವರು ಮನೆಯ ಬೆಡ್ ರೂಮಿನ ಕಿಟಕಿಯ ಬಳಿ ಬಂದು ನೋಡಿದಾಗ ಯಾರೋ ಕಳ್ಳರು ಕಿಟಕಿಯ ಬಾಗಿಲಿನ ಗಾಜು ಮುರಿದು ಚಿಲಕ ತೆಗೆದು ಕಿಟಕಿಯ ಸರಳನ್ನು ಪಿಕ್ಕಾಸಿನಿಂದ ಮುರಿದು ಒಳ ನುಗ್ಗಿ ಬೆಡ್ ರೂಮಿನ ಗಾದ್ರೇಜ್‍ನಲ್ಲಿದ್ದ ಸುಮಾರು 1.48  ಲಕ್ಷ ರೂಪಾಯಿ ಮೌಲ್ಯದ 40 ಗ್ರಾಂ ತೂಕದ ಚಿನ್ನದ ನೆಕ್ಲೆಸನ್ನು ಕಳವುಗೈದಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ನಸೀರ ಅವರು ನೀಡಿದ ದೂರಿನಂತೆ ಬೆಳ್ಳಾರೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಸುಳ್ಯ : ಮನೆಯ ಕಿಟಕಿ ಸರಳು ಮುರಿದು ಒಳನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಎಗರಿಸಿದ ಕಳ್ಳರು Rating: 5 Reviewed By: karavali Times
Scroll to Top