17 ವರ್ಷಗಳಿಂದ ನ್ಯಾಯಾಲಕ್ಕೆ ಹಾಜರಾದೆ ತಲೆ ಮರೆಸಿಕೊಂಡಿದ್ದ ಆರೋಪಿ ಬಂಧಿಸಿದ ಬಂಟ್ವಾಳ ನಗರ ಪೊಲೀಸರು - Karavali Times 17 ವರ್ಷಗಳಿಂದ ನ್ಯಾಯಾಲಕ್ಕೆ ಹಾಜರಾದೆ ತಲೆ ಮರೆಸಿಕೊಂಡಿದ್ದ ಆರೋಪಿ ಬಂಧಿಸಿದ ಬಂಟ್ವಾಳ ನಗರ ಪೊಲೀಸರು - Karavali Times

728x90

29 March 2024

17 ವರ್ಷಗಳಿಂದ ನ್ಯಾಯಾಲಕ್ಕೆ ಹಾಜರಾದೆ ತಲೆ ಮರೆಸಿಕೊಂಡಿದ್ದ ಆರೋಪಿ ಬಂಧಿಸಿದ ಬಂಟ್ವಾಳ ನಗರ ಪೊಲೀಸರು

ಬಂಟ್ವಾಳ, ಮಾರ್ಚ್ 29, 2024 (ಕರಾವಳಿ ಟೈಮ್ಸ್) : ಬಂಟ್ವಾಳ ನಗರ ಪೆÇಲೀಸ್ ಠಾಣಾ ಅಪರಾಧ ಕ್ರಮಾಂಕ 189/2007 ಕಲಂ 504, 506, 323, 324 ಜೊತೆಗೆ 34 ಐಪಿಸಿ ಪ್ರಕರಣದ ಆರೋಪಿಯಾಗಿದ್ದು, ಕಳೆದ 17 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಮಂಚಿ ಗ್ರಾಮದ ಕುಕ್ಕಾಜೆ ಕಂಚಿಲ ನಿವಾಸಿ ಅಬುಸಾಲಿ (41) ಎಂಬಾತನನ್ನು ಬಂಟ್ವಾಳ ನಗರ ಪೊಲೀಸರು ಶುಕ್ರವಾರ ಬಂಧಿಸುವಲ್ಲಿ ಸಫಲರಾಗಿದ್ದಾರೆ. 

ಬಂಟ್ವಾಳ ನಗರ ಠಾಣಾ ಪಿಎಸ್ಸೈ ರಾಮಕೃಷ್ಣ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ರಾಜೇಶ್ ಎಸ್,  ಗಣೇಶ್ ಎನ್ ಅವರ ತಂಡ ಆರೋಪಿಯನ್ನು ಬೆಳ್ತಂಗಡಿ ತಾಲೂಕಿನ ಸಂತೆಕಟ್ಟೆ ಎಂಬಲ್ಲಿ ದಸ್ತಗಿರಿ ಮಾಡಿದ್ದಾರೆ. ಬಂಧಿತ ಆರೋಪಿಯನ್ನು ಬಂಟ್ವಾಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: 17 ವರ್ಷಗಳಿಂದ ನ್ಯಾಯಾಲಕ್ಕೆ ಹಾಜರಾದೆ ತಲೆ ಮರೆಸಿಕೊಂಡಿದ್ದ ಆರೋಪಿ ಬಂಧಿಸಿದ ಬಂಟ್ವಾಳ ನಗರ ಪೊಲೀಸರು Rating: 5 Reviewed By: karavali Times
Scroll to Top