ದ್ವಿತೀಯ ಪಿಯುಸಿ ಪರೀಕ್ಷೆ-1 ರ ಫಲಿತಾಂಶ ಪ್ರಕಟ : ಶೇ 81.15 ರಿಸಲ್ಟ್ - Karavali Times ದ್ವಿತೀಯ ಪಿಯುಸಿ ಪರೀಕ್ಷೆ-1 ರ ಫಲಿತಾಂಶ ಪ್ರಕಟ : ಶೇ 81.15 ರಿಸಲ್ಟ್ - Karavali Times

728x90

10 April 2024

ದ್ವಿತೀಯ ಪಿಯುಸಿ ಪರೀಕ್ಷೆ-1 ರ ಫಲಿತಾಂಶ ಪ್ರಕಟ : ಶೇ 81.15 ರಿಸಲ್ಟ್

ಬೆಂಗಳೂರು, ಎಪ್ರಿಲ್ 10, 2024 (ಕರಾವಳಿ ಟೈಮ್ಸ್) : 2023-24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1 ರ ಫಲಿತಾಂಶ ಬುಧವಾರ ಪ್ರಕಟಗೊಂಡಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಬುಧವಾರ ಬೆಳಿಗ್ಗೆ ಪತ್ರಿಕಾಗೋಷ್ಠಿ ನಡೆಸಿ ಫಲಿತಾಂಶ ಘೋಷಿಸಿದೆ. ಮಂಡಳಿಯ ಅಧ್ಯಕ್ಷೆ ಎನ್. ಮಂಜುಶ್ರೀ, ಪರೀಕ್ಷಾ ವಿಭಾಗದ ನಿರ್ದೇೀಶಕ ಗೋಪಾಲಕೃಷ್ಣ ಸೇರಿ ಹಿರಿಯ ಅಧಿಕಾರಿಗಳು ಫಲಿತಾಂಶ ಘೋಷಿಸಿದ್ದಾರೆ. ಕಳೆದ ವರ್ಷಕ್ಕಿಂತ ಈ ಬಾರಿ 6.48 ಶೇಕಡಾ ಹೆಚ್ಚಿನ ಫಲಿತಾಂಶ ಅಂದರೆ 81.15% ಶೇಕಡಾ ಫಲಿತಾಂಶ ಬಂದಿದೆ.

ಪ್ರತೀ ವರ್ಷದಂತೆ ಈ ಬಾರಿ ಕೂಡ  ಬಾಲಕಿಯರೇ (84.87%) ಮೇಲುಗೈ ಸಾಧಿಸಿದ್ದಾರೆ. ಬಾಲಕರು 76.98% ಮಂದಿ ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗ 89.96%, ವಾಣಿಜ್ಯ ವಿಭಾಗ 80.94%, ಕಲಾ ವಿಭಾಗದಲ್ಲಿ 68.36% ಫಲಿತಾಂಶ ಬಂದಿದೆ. 35 ಕಾಲೇಜುಗಳಿಗೆ ಈ ಬಾರಿ  ಶೂನ್ಯ ಫಲಿತಾಂಶ ಸಂಪಾದಿಸಿದೆ. ಒಟ್ಟು 463 ಕಾಲೇಜುಗಳಲ್ಲಿ ಶೇ. 100 ಫಲಿತಾಂಶ ಬಂದಿದ್ದು, ಅದರಲ್ಲಿ 91 ಸರಕಾರಿ ಕಾಲೇಜುಗಳಲ್ಲಿ 100% ಫಲಿತಾಂಶ ಬಂದಿದೆ. 

ಕಳೆದ ಬಾರಿಯಂತೆ ಈ ಬಾರಿ ಕೂಡ  ದಕ್ಷಿಣ ಕನ್ನಡ (97.37%) ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ. ಉಡುಪಿ (96.80%) ಎರಡನೇ ಸ್ಥಾನ ಪಡೆದಿದೆ. ವಿಜಯಪುರ (94.89%) ತೃತೀಯ ಸ್ಥಾನ ಪಡೆದಿದೆ.  ಗದಗ (72.86%) ಕೊನೆಯ ಸ್ಥಾನ ಪಡೆದಿದೆ.

ಜಿಲ್ಲೆಗಳ ಶೇಕಡಾವಾರು ಫಲಿತಾಂಶ : ದಕ್ಷಿಣ ಕನ್ನಡ 97.37%, ಉಡುಪಿ 96.80%, ವಿಜಯಪುರ 94.89%, ಉತ್ತರ ಕನ್ನಡ 92.51%, ಕೊಡಗು 92.13%, ಬೆಂಗಳೂರು ದಕ್ಷಿಣ 89.57%, ಬೆಂಗಳೂರು ಉತ್ತರ 88.67%, ಶಿವಮೊಗ್ಗ 88.58%, ಚಿಕ್ಕಮಗಳೂರು 88.20%, ಬೆಂಗಳೂರು ಗ್ರಾಮಾಂತರ 87.55%, ಬಾಗಲಕೋಟೆ 87.54%, ಕೋಲಾರ 86.12%, ಹಾಸನ 85.83%, ಚಾಮರಾಜನಗರ 84.99%, ಚಿಕ್ಕೋಡಿ 84.10%, ರಾಮನಗರ 83.58%, ಮೈಸೂರು 83.13%, ಚಿಕ್ಕಬಳ್ಳಾಪುರ 82.84%, ಬೀದರ್ 81.69%, ತುಮಕೂರು 81.03%, ದಾವಣಗೆರೆ 80.96%, ಕೊಪ್ಪಳ 80.83%, ಧಾರವಾಡ 80.70%, ಮಂಡ್ಯ 80.56%, ಹಾವೇರಿ 78.36%, ಯಾದಗಿರಿ 77.29%, ಬೆಳಗಾವಿ 77.20%, ಕಲಬುರಗಿ 75.48%, ಬಳ್ಳಾರಿ 74.70%, ರಾಯಚೂರು 73.11%, ಚಿತ್ರದುರ್ಗ 72.92%,  ಗದಗ 72.86% ಫಲಿತಾಂಶ ದಾಖಲಿಸಿದೆ. 

ಕಲಾ ವಿಭಾಗದಲ್ಲಿ 596 ಅಂಕಗಳೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದವರು : ಬೆಂಗಳೂರಿನ ಮೇಧಾ ಡಿ, ವಿಜಯಪುರದ ವೇದಾಂತ್, ಬಳ್ಳಾರಿಯ ಕವಿತಾ

ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ  ಟಾಪರ್ : ಗಾನವಿ ಎಂ. ವಿದ್ಯಾನಿಧಿ ಪಿಯು ಕಾಲೇಜು ತುಮಕೂರು  (597) ಪ್ರಥಮ ಸ್ಥಾನ, ಪವನ್ ಎಂ.ಎಸ್ ಕುಮಧ್ವತಿ ಪಿಯು ಕಾಲೇಜು ಶಿವಮೊಗ್ಗ 596 ದ್ವಿತೀಯ ಸ್ಥಾನ, ಹರ್ಷಿತಾ ಪೂರ್ಣ ಪ್ರಜ್ಞಾ ಪಿಯು ಕಾಲೇಜ್ ಉಡುಪಿ 596 ದ್ವಿತೀಯ ಸ್ಥಾನ, ತುಳಸಿ ಪೈ ಕೆನರಾ ಕಾಲೇಜು ಮಂಗಳೂರು 596 ದ್ವಿತೀಯ ಸ್ಥಾನ, ತೇಜಸ್ವಿನಿ ಕೆ. ಕಾಲೆ, ಎಂಇಎಸ್ ಮಲ್ಲೇಶ್ವರ 596  ದ್ವಿತೀಯ ಸ್ಥಾನ, 

ವಿಜ್ಞಾನ ವಿಭಾಗ ರಾಜ್ಯಕ್ಕೆ  ಟಾಪರ್ : ವಿದ್ಯಾಲಕ್ಷ್ಮಿ - ವಿದ್ಯಾನಿಕೇತನ ಎಸ್.ಸಿ ಪಿಯು ಕಾಲೇಜು 598 (¥್ರಥಮ ಸ್ಥಾನ), ಉರ್ವಿಷ್ ಪ್ರಶಾಂತ್- ಆದಿಚುಂಚನಗಿರಿ ಪಿಯು ಕಾಲೇಜು ತುಮಕೂರು-597 (ದ್ವಿತೀಯ ಸ್ಥಾನ), ವೈಭವಿ ಆಚಾರ್ಯ - ವಿದ್ಯೋಧಯ ಪಿಯು ಕಾಲೇಜು, ಉಡುಪಿ -597 (ದ್ವಿತೀಯ ಸ್ಥಾನ), ಜಾಹ್ನವಿ - ಆರ್.ವಿ.ಪಿಬಿ ಪಿಯು ಕಾಲೇಜು ಮೈಸೂರು -597 (ದ್ವಿತೀಯ ಸ್ಥಾನ), ಗುಣಸಾಗರ್ - ಎಕ್ಸಲೆಂಟ್ ಪಿಯು ಕಾಲೇಜು ಮೂಡುಬಿದಿರೆ - 597 (ದ್ವಿತೀಯ ಸ್ಥಾನ) ಪಡೆದಿದ್ದಾರೆ. 

35 ಕಾಲೇಜುಗಳು ಶೂನ್ಯ ಫಲಿತಾಂಶ ಬಂದಿದೆ. ಶೂನ್ಯ ಫಲಿತಾಂಶ ಪಡೆದ ಕಾಲೇಜುಗಳ ವಿವರ :

ಸರಕಾರಿ ಕಾಲೇಜು- 02

ಅನುದಾನಿತ ಕಾಲೇಜು - 06

ಅನುದಾನ ರಹಿತ ಕಾಲೇಜು - 26

ವಿಭಜಿತ ಪದವಿಪೂರ್ವ ಕಾಲೇಜು - 01


ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು - 6,98,378

ತೇರ್ಗಡೆಯಾದ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 5,52690

ಶೇ.85% ಹಾಗೂ ಅದಕ್ಕಿಂತ ಹೆಚ್ಚಿನ ಅಂಕ - 1,53,370

ಶೇ.60% - 2,89733

ದ್ವಿತೀಯ ದರ್ಜೆ- 72,098 

ತೃತೀಯ ದರ್ಜೆಯಲ್ಲಿ ಉತ್ತೀರ್ಣರಾದವರು - 37,489

ಈ ಬಾರಿ ರಾಜ್ಯದಾದ್ಯಂತ ಸುಮಾರು 1,124 ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆದಿತ್ತು. ಸುಮಾರು 6.98 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗಿಯಾಗಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ದ್ವಿತೀಯ ಪಿಯುಸಿ ಪರೀಕ್ಷೆ-1 ರ ಫಲಿತಾಂಶ ಪ್ರಕಟ : ಶೇ 81.15 ರಿಸಲ್ಟ್ Rating: 5 Reviewed By: karavali Times
Scroll to Top