ಮೊಡಂಕಾಪು ಇನ್ಫಂಟ್ ಜೀಸಸ್ ಶಾಲಾ ವಿದ್ಯಾರ್ಥಿನಿ ತಸ್ನೀಂಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 618 ಅಂಕಗಳು - Karavali Times ಮೊಡಂಕಾಪು ಇನ್ಫಂಟ್ ಜೀಸಸ್ ಶಾಲಾ ವಿದ್ಯಾರ್ಥಿನಿ ತಸ್ನೀಂಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 618 ಅಂಕಗಳು - Karavali Times

728x90

9 May 2024

ಮೊಡಂಕಾಪು ಇನ್ಫಂಟ್ ಜೀಸಸ್ ಶಾಲಾ ವಿದ್ಯಾರ್ಥಿನಿ ತಸ್ನೀಂಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 618 ಅಂಕಗಳು

ಬಂಟ್ವಾಳ, ಮೇ 09, 2024 (ಕರಾವಳಿ ಟೈಮ್ಸ್) : ಬಿ ಸಿ ರೋಡು ಸಮೀಪದ ಮೊಡಂಕಾಪು ಇನ್ಫಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿನಿ ತಸ್ನೀಂ ಅವರು 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ-1 ರಲ್ಲಿ 618 ಅಂಕಗಳನ್ನು ಗಳಿಸುವ ಮೂಲಕ 98.88 ಶೇಕಡಾ ಫಲಿತಾಂಶ ದಾಖಲಿಸಿದ್ದಾಳೆ. ಆಂಗ್ಲ ಭಾಷಾ ಪತ್ರಿಕೆಯಲ್ಲಿ ಈಕೆ 100 ಪೂರ್ಣ ಅಂಕಗಳನ್ನು ಗಳಿಸಿದ್ದು, ಕನ್ನಡ ಭಾಷಾ ಪತ್ರಿಕೆಯಲ್ಲಿ 124, ಹಿಂದಿ ಹಾಗೂ ಸಮಾಜ ವಿಜ್ಞಾನದಲ್ಲಿ 99 ಹಾಗೂ ಗಣಿತ ಹಾಗೂ ವಿಜ್ಞಾನದಲ್ಲಿ 98 ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾಳೆ. ಮಾಡಿದ್ದಾಳೆ. ಈಕೆ ಬಿ ಸಿ ರೋಡು ಸಮೀಪದ ಕೈಕಂಬ ನಿವಾಸಿ, ಇಂಜಿನಿಯರ್ ಮೊಹಮ್ಮದ್ ಕೆ ಪಿ ಹಾಗೂ ಝೈಬುನ್ನೀಸಾ ದಂಪತಿಯ ಪುತ್ರಿಯಾಗಿದ್ದಾಳೆ. 

  • Blogger Comments
  • Facebook Comments

0 comments:

Post a Comment

Item Reviewed: ಮೊಡಂಕಾಪು ಇನ್ಫಂಟ್ ಜೀಸಸ್ ಶಾಲಾ ವಿದ್ಯಾರ್ಥಿನಿ ತಸ್ನೀಂಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 618 ಅಂಕಗಳು Rating: 5 Reviewed By: karavali Times
Scroll to Top