ಮೂರ್ಜೆ : ದ್ವಿಚಕ್ರ ವಾಹನದಲ್ಲಿ ಸಹಸವಾರರಾಗಿ ತೆರಳುತ್ತಿದ್ದ ಮಹಿಳೆ ರಸ್ತೆಗೆ ಬಿದ್ದು ಗಾಯ - Karavali Times ಮೂರ್ಜೆ : ದ್ವಿಚಕ್ರ ವಾಹನದಲ್ಲಿ ಸಹಸವಾರರಾಗಿ ತೆರಳುತ್ತಿದ್ದ ಮಹಿಳೆ ರಸ್ತೆಗೆ ಬಿದ್ದು ಗಾಯ - Karavali Times

728x90

11 June 2024

ಮೂರ್ಜೆ : ದ್ವಿಚಕ್ರ ವಾಹನದಲ್ಲಿ ಸಹಸವಾರರಾಗಿ ತೆರಳುತ್ತಿದ್ದ ಮಹಿಳೆ ರಸ್ತೆಗೆ ಬಿದ್ದು ಗಾಯ

ಬಂಟ್ವಾಳ, ಜೂನ್ 11, 2024 (ಕರಾವಳಿ ಟೈಮ್ಸ್) : ಬೈಕಿನಿಂದ ಬಿದ್ದು ಮಹಿಳೆಯೋರ್ವರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಮೂಡುಪಡುಕೋಡಿ ಗ್ರಾಮದ ಮೂರ್ಜೆ ಶಾಲಾ ಬಳಿ ಸಂಭವಿಸಿದೆ. 

ಗಾಯಗೊಂಡ ಮಹಿಳೆಯನ್ನು ಇಲ್ಲಿನ ನಿವಾಸಿ ನಸೀಮಾ ಎಂದು ಹೆಸರಿಸಲಾಗಿದೆ. ಇವರು ತಮ್ಮ ಸಂಬಂಧಿ ಮಹಮ್ಮದ್ ಫಾರೂಕ್ ಅವರ ಬೈಕಿನಲ್ಲಿ ಬಂಟ್ವಾಳ-ಕಡೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ತೆರಳುತ್ತಿದ್ದ ವೇಳೆ ಮೂರ್ಜೆ ಶಾಲಾ ಬಳಿ ಬೈಕಿನಲ್ಲಿದ್ದ ನಸೀಮಾ ಅವರು ಅಯತಪ್ಪಿ ರಸ್ತೆಗೆ ಬಿದ್ದಿದ್ದಾರೆ. ತಕ್ಷಣ ಅವರನ್ನು ಬೈಕ್ ಸವಾರ ಹಾಗೂ ಸ್ಥಳೀಯರು ಮಂಗೂರು ಯುನಿಟಿ ಆಸ್ಪತ್ರೆಗೆ ಸಾಗಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಗಾಯಾಳು ನಸೀಮಾ ಅವರ ಪುತ್ರ ಮಹಮ್ಮದ್ ಅಫೀಝ್ ಅವರು ನೀಡಿದ ದೂರಿನಂತೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಮೂರ್ಜೆ : ದ್ವಿಚಕ್ರ ವಾಹನದಲ್ಲಿ ಸಹಸವಾರರಾಗಿ ತೆರಳುತ್ತಿದ್ದ ಮಹಿಳೆ ರಸ್ತೆಗೆ ಬಿದ್ದು ಗಾಯ Rating: 5 Reviewed By: karavali Times
Scroll to Top