ಚೆಂಡ್ತಿಮಾರ್ : ಬೈಕುಗಳ ನಡುವೆ ಅಪಘಾತ, ಇಬ್ಬರು ಸವಾರರಿಗೆ ಗಾಯ - Karavali Times ಚೆಂಡ್ತಿಮಾರ್ : ಬೈಕುಗಳ ನಡುವೆ ಅಪಘಾತ, ಇಬ್ಬರು ಸವಾರರಿಗೆ ಗಾಯ - Karavali Times

728x90

6 June 2024

ಚೆಂಡ್ತಿಮಾರ್ : ಬೈಕುಗಳ ನಡುವೆ ಅಪಘಾತ, ಇಬ್ಬರು ಸವಾರರಿಗೆ ಗಾಯ

ಬಂಟ್ವಾಳ, ಜೂನ್ 06, 2024 (ಕರಾವಳಿ ಟೈಮ್ಸ್) : ಬೈಕುಗಳೆರು ಡಿಕ್ಕಿ ಹೊಡೆದು ಸವಾರರಿಬ್ಬರು ಗಾಯಗೊಂಡ ಘಟನೆ ಬಿ ಕಸ್ಬಾ ಗ್ರಾಮದ ಚೆಂಡ್ತಿಮಾರ್ ಎಂಬಲ್ಲಿ ಬುಧವಾರ ಮಧ್ಯಾಹ್ನ ವೇಳೆ ಸಂಭವಿಸಿದೆ. 

ಗಾಯಗೊಂಡ ಬೈಕ್ ಸವಾರರನ್ನು ಸಯ್ಯಿದ್ ಫಕೀರ್ ಹಾಗೂ ಸ್ಟ್ಯಾನಿ ಮೊಂತೆರೋ ಎಂದು ಹೆಸರಿಸಲಾಗಿದೆ. ಫಕೀರ್ ಅವರು ಚಲಾಯಿಸುತ್ತಿದ್ದ ಬೈಕ್ ಸ್ಟ್ಯಾನಿ ಅವರು ಚಲಾಯಿಸುತ್ತಿದ್ದ ಬೈಕಿಗೆ ಚೆಂಡ್ತಿಮಾರ್ ಎಂಬಲ್ಲಿ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಅಪಘಾತದಿಂದ ಇಬ್ಬರು ಸವಾರರು ರಸ್ತೆಗೆ ಬಿದ್ದು ಗಾಯಗೊಂಡಿದ್ದು, ಅವರನ್ನು ಬಂಟ್ವಾಳ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಚೆಂಡ್ತಿಮಾರ್ : ಬೈಕುಗಳ ನಡುವೆ ಅಪಘಾತ, ಇಬ್ಬರು ಸವಾರರಿಗೆ ಗಾಯ Rating: 5 Reviewed By: karavali Times
Scroll to Top