ಫರಂಗಿಪೇಟೆ : ಅಕ್ರಮ ಮರಳು ಸಾಗಾಟ ಪತ್ತೆ ಹಚ್ಚಿದ ಬಂಟ್ವಾಳ ಗ್ರಾಮಾಂತರ ಪೊಲೀಸರು - Karavali Times ಫರಂಗಿಪೇಟೆ : ಅಕ್ರಮ ಮರಳು ಸಾಗಾಟ ಪತ್ತೆ ಹಚ್ಚಿದ ಬಂಟ್ವಾಳ ಗ್ರಾಮಾಂತರ ಪೊಲೀಸರು - Karavali Times

728x90

7 June 2024

ಫರಂಗಿಪೇಟೆ : ಅಕ್ರಮ ಮರಳು ಸಾಗಾಟ ಪತ್ತೆ ಹಚ್ಚಿದ ಬಂಟ್ವಾಳ ಗ್ರಾಮಾಂತರ ಪೊಲೀಸರು

ಬಂಟ್ವಾಳ, ಜೂನ್ 07, 2024 (ಕರಾವಳಿ ಟೈಮ್ಸ್) :  ಪುದು ಗ್ರಾಮದ ಫರಂಗಿಪೇಟೆಯಲ್ಲಿ ಬುಧವಾರ ರಾತ್ರಿ ಕಾರ್ಯಾಚರಣೆ ನಡೆಸಿದ ಬಂಟ್ವಾಳ ಗ್ರಾಮಾಂತರ ಪೊಲೀಸರು ಅಕ್ರಮ ಮರಳು ಸಾಗಾಟ ಪತ್ತೆ ಹಚ್ಚಿ ಲಾರಿ ಚಾಲಕ ಹಾಗೂ ಮಾಲಕಿಯ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಫರಂಗಿಪೇಟೆಯಲ್ಲಿ ಬುಧವಾರ ರಾತ್ರಿ ಮಂಗಳೂರು ಕಡೆಯಿಂದ ಬರುತ್ತಿದ್ದ, ಕೆಎ19 ಎಎ9244 ನೋಂದಣಿ ಸಂಖ್ಯೆಯ ಟಿಪ್ಪರ್ ಲಾರಿಯನ್ನು ಬಂಟ್ವಾಳ ಗ್ರಾಮಾಂತರ ಠಾಣಾ ಪಿಎಎಸ್ಸೈ ಹರೀಶ್ ಎಂ ಆರ್ ನೇತೃತ್ವದ ಪೊಲೀಸರು ತಡೆದು ಪರಿಶೀಲಿಸಿದಾಗ ಅಕ್ರಮ ಮರಳು ಸಾಗಾಟ ಕೃತ್ಯ ಬೆಳಕಿಗೆ ಬಂದಿದೆ. 

ಈ ಬಗ್ಗೆ ಲಾರಿ ಚಾಲಕ ಶಾನವಾಝ್ ಎಂಬಾತನಲ್ಲಿ ವಿಚಾರಿಸಿದಾಗ, ಟಿಪ್ಪರ್ ಮಾಲಕಿ ಶಾಹಿದಾ ಬಾನು ಎಂದು ತಿಳಿದುಬಂದಿದ್ದು, ಆರೋಪಿ ಚಾಲಕ ವಳಚ್ಚಿಲ್ ಎಂಬಲ್ಲಿನ ಹೊಳೆಬದಿಯ ಧಕ್ಕೆಯಿಂದ ಮರಳನ್ನು ಅಕ್ರಮವಾಗಿ ಲೋಡು ಮಾಡಿ ಸಾಗಿಸುತ್ತಿರುವುದಾಗಿ ತಿಳಿಸಿರುತ್ತಾನೆ. ಲಾರಿ ಸಹಿತ ಮರಳನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಫರಂಗಿಪೇಟೆ : ಅಕ್ರಮ ಮರಳು ಸಾಗಾಟ ಪತ್ತೆ ಹಚ್ಚಿದ ಬಂಟ್ವಾಳ ಗ್ರಾಮಾಂತರ ಪೊಲೀಸರು Rating: 5 Reviewed By: karavali Times
Scroll to Top