ಇರಾ : ಕಾರುಗಳ ನಡುವೆ ಅಪಘಾತ, ಮಹಿಳೆ ಸಹಿತ ಇಬ್ಬರಿಗೆ ಗಾಯ - Karavali Times ಇರಾ : ಕಾರುಗಳ ನಡುವೆ ಅಪಘಾತ, ಮಹಿಳೆ ಸಹಿತ ಇಬ್ಬರಿಗೆ ಗಾಯ - Karavali Times

728x90

10 June 2024

ಇರಾ : ಕಾರುಗಳ ನಡುವೆ ಅಪಘಾತ, ಮಹಿಳೆ ಸಹಿತ ಇಬ್ಬರಿಗೆ ಗಾಯ

ಬಂಟ್ವಾಳ, ಜೂನ್ 10, 2024 (ಕರಾವಳಿ ಟೈಮ್ಸ್) : ಕಾರುಗಳ ನಡುವೆ ಡಿಕ್ಕಿ ಸಂಭವಿಸಿ ಮಹಿಳೆ ಹಾಗೂ ಕಾರು ಚಾಲಕ ಗಾಯಗೊಂಡ ಘಟನೆ ಇರಾ ಗ್ರಾಮದ ಮೋಂತಿಮಾರು ಎಂಬಲ್ಲಿ ಭಾನುವಾರ ಅಪರಾಹ್ನ ಸಂಭವಿಸಿದೆ. 

ಗಾಯಾಳು ಮಹಿಳೆಯನ್ನು ನಾಗವೇಣಿ ಹಾಗೂ ಕಾರು ಚಾಲಕ ರವಿರಾಜ ಗಟ್ಟಿ ಎಂದು ಹೆಸರಿಸಲಾಗಿದೆ. ಸುಳ್ಯ ನಿವಾಸಿ ಕಿಶನ್ ಕೆ (26) ಎಂಬವರು ಭಾನುವಾರ ಮಧ್ಯಾಹ್ನ ತನ್ನ ಕಾರಿನಲ್ಲಿ ತಾಯಿ ನಾಗವೇಣಿ ಅವರೊಂದಿಗೆ ಕುತ್ತಾರು ಕಡೆಗೆ ಮಂಚಿ-ಮುಡಿಪು ರಸ್ತೆಯಲ್ಲಿ ಸಂಚರಿಸುತ್ತಿದ್ದ ವೇಳೆ ಮುಡಿಪು ಕಡೆಯಿಂದ ಬಂದ ರವಿರಾಜ ಗಟ್ಟಿ ಎಂಬವರು ಚಲಾಯಿಸಿಕೊಂಡು ಬಂದ ಇನ್ನೊಂದು ಕಾರು ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. 

ಗಾಯಾಳು ನಾಗವೇಣಿ ಅವರನ್ನು ಪುತ್ತೂರು ಸಾರ್ವಜನಿಕ ಆಸ್ಪತ್ರೆಗೆ ಹಾಗೂ ರವಿರಾಜ ಗಟ್ಟಿ ಅವರನ್ನು ದೇರಳಕಟ್ಟೆ ಕೆ ಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಇರಾ : ಕಾರುಗಳ ನಡುವೆ ಅಪಘಾತ, ಮಹಿಳೆ ಸಹಿತ ಇಬ್ಬರಿಗೆ ಗಾಯ Rating: 5 Reviewed By: karavali Times
Scroll to Top