ಬಡಗಬೆಳ್ಳೂರು : ಸಾರ್ವಜನಿಕ ಸ್ಥಳದಲ್ಲಿ ಮಾರಕಾಸ್ತ್ರ ಹಿಡಿದು ಆತಂಕ ಸೃಷ್ಟಿಸಿದ ಯುವಕರು, ಪೊಲೀಸರ ಕಂಡು ಪರಾರಿ, ಪ್ರಕರಣ ದಾಖಲು - Karavali Times ಬಡಗಬೆಳ್ಳೂರು : ಸಾರ್ವಜನಿಕ ಸ್ಥಳದಲ್ಲಿ ಮಾರಕಾಸ್ತ್ರ ಹಿಡಿದು ಆತಂಕ ಸೃಷ್ಟಿಸಿದ ಯುವಕರು, ಪೊಲೀಸರ ಕಂಡು ಪರಾರಿ, ಪ್ರಕರಣ ದಾಖಲು - Karavali Times

728x90

10 June 2024

ಬಡಗಬೆಳ್ಳೂರು : ಸಾರ್ವಜನಿಕ ಸ್ಥಳದಲ್ಲಿ ಮಾರಕಾಸ್ತ್ರ ಹಿಡಿದು ಆತಂಕ ಸೃಷ್ಟಿಸಿದ ಯುವಕರು, ಪೊಲೀಸರ ಕಂಡು ಪರಾರಿ, ಪ್ರಕರಣ ದಾಖಲು

ಬಂಟ್ವಾಳ, ಜೂನ್ 10, 2024 (ಕರಾವಳಿ ಟೈಮ್ಸ್) : ತಾಲೂಕಿನ ಬಡಗಬೆಳ್ಳೂರಿನಲ್ಲಿ ಐವರು ಯುವಕರ ತಂಡ ಸಾರ್ವಜನಿಕ ಸ್ಥಳದಲ್ಲಿ ಮಾರಕಾಸ್ತ್ರ ಪ್ರದರ್ಶಿಸಿ ಆತಂಕ ಉಂಟು ಮಾಡುತ್ತಿದ್ದ ಘಟನೆ ಭಾನುವಾರ ಸಂಜೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಬರುತ್ತಲೇ ಆರೋಪಿಗಳು ಪರಾರಿಯಾಗಿದ್ದಾರೆ. 

ಸಾರ್ವಜನಿಕವಾಗಿ ಮಾರಕಾಸ್ತ್ರ ಪ್ರದರ್ಶಿಸಿದ ಆರೋಪಿಗಳನ್ನು ಭೋಜರಾಜ, ವಿನೋದ್, ವಿವೇಕ್, ರಕ್ಷಿತ್, ರಕ್ಷಕ್ ಎಂದು ಗುರುತಿಸಲಾಗಿದೆ. ಆರೋಪಿಗಳು ಬಡಗಬೆಳ್ಳೂರು ಎಂಬಲ್ಲಿ ಸಾರ್ವಜನಿಕವಾಗಿ ಮಾರಕಾಸ್ತ್ರ ಪ್ರದರ್ಶಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಪಿಎಸ್ಸೈ ಹರೀಶ್ ಎಂ ಆರ್ ನೇತೃತ್ವದ ಪೊಲೀಸರು ತೆರಳಿದಾಗ, ಆರೋಪಿಗಳು ಸಾರ್ವಜನಿಕ ಸ್ಥಳದಲ್ಲಿ ತಲವಾರು ಹಿಡಿದುಕೊಂಡು  ಸಾರ್ವಜನಿಕವಾಗಿ ಭಯವನ್ನುಂಟು ಮಾಡುತ್ತಿರುವುದು ಕಂಡುಬಂದಿದೆ. ಇಲಾಖಾ ವಾಹನ ಸ್ಥಳಕ್ಕೆ ಬರುವುದನ್ನು ಕಂಡ ಆರೋಪಿಗಳು ಪರಾರಿಯಾಗಿದ್ದು, ಸ್ಥಳದಲ್ಲಿದ್ದ  ಕೆಎ 70 3479 ನೋಂದಣಿ ಸಂಖ್ಯೆಯ ಅಟೋ ರಿಕ್ಷಾದಲ್ಲಿ ಒಂದು ತಲವಾರು ಪತ್ತೆಯಾಗಿರುತ್ತದೆ. ಆರೋಪಿಗಳ ವಿರುದ್ದ ಬಂಟ್ವಾಳ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಂಕ 69/2024, ಕಲಂ 25(1ಬಿ) ಭಾರತೀಯ  ಶಸ್ತಾಸ್ತ್ರ  ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಬಡಗಬೆಳ್ಳೂರು : ಸಾರ್ವಜನಿಕ ಸ್ಥಳದಲ್ಲಿ ಮಾರಕಾಸ್ತ್ರ ಹಿಡಿದು ಆತಂಕ ಸೃಷ್ಟಿಸಿದ ಯುವಕರು, ಪೊಲೀಸರ ಕಂಡು ಪರಾರಿ, ಪ್ರಕರಣ ದಾಖಲು Rating: 5 Reviewed By: karavali Times
Scroll to Top