ಮಾರ್ನಬೈಲು : ಸ್ಕೂಟರಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಸವಾರನ ಮೇಲೆ ಹರಿದ ಲಾರಿ, ಸ್ಕೂಟರ್ ಡ್ರೈವರ್ ಸ್ಪಾಟ್ ಡೆತ್ - Karavali Times ಮಾರ್ನಬೈಲು : ಸ್ಕೂಟರಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಸವಾರನ ಮೇಲೆ ಹರಿದ ಲಾರಿ, ಸ್ಕೂಟರ್ ಡ್ರೈವರ್ ಸ್ಪಾಟ್ ಡೆತ್ - Karavali Times

728x90

8 June 2024

ಮಾರ್ನಬೈಲು : ಸ್ಕೂಟರಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಸವಾರನ ಮೇಲೆ ಹರಿದ ಲಾರಿ, ಸ್ಕೂಟರ್ ಡ್ರೈವರ್ ಸ್ಪಾಟ್ ಡೆತ್

ಬಂಟ್ವಾಳ, ಜೂನ್ 08, 2024 (ಕರಾವಳಿ ಟೈಮ್ಸ್) : ಟಿಪ್ಪರ್ ಲಾರಿಯೊಂದು ಸ್ಕೂಟರಿಗೆ ಹಿಂದಿನಿಂದ ಡಿಕ್ಕಿ ಹೊಡೆದು, ಸವಾರನ ಮೇಲೆ ಲಾರಿ ಹರಿದ ಪರಿಣಾಮ ಸ್ಕೂಟರ್ ಸವಾರ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಸಜಿಪಮುನ್ನೂರು ಗ್ರಾಮದ ಮಾರ್ನಬೈಲ್ ಸಮೀಪದ ಕಂದೂರು ಬಜಾರ್ ಆಡಿಟೋರಿಯಂ ಬಳಿ ಶನಿವಾರ ಅಪರಾಹ್ನ ವೇಳೆ ಸಂಭವಿಸಿದೆ. 

ಮೃತ ಸ್ಕೂಟರ್ ಸವಾರನನ್ನು ಅಮ್ಟಾಡಿ ಗ್ರಾಮದ ಕಲಾಯಿ ನಿವಾಸಿ ರಾಮಣ್ಣ ನಾಯ್ಕ (47) ಎಂದು ಹೆಸರಿಸಲಾಗಿದೆ. ಬಂಟ್ವಾಳ-ಬೈಪಾಸಿನಲ್ಲಿ ಕಾರ್ಯಾಚರಿಸುತ್ತಿರುವ ಇಂಡಿಯನ್ ಆಯಿಲ್ ಪೆಟ್ರೋಲಿಯಂ ಪಂಪಿನಲ್ಲಿ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ರಾಮಣ್ಣ ನಾಯ್ಕ ಅವರು ತನ್ನ ಸ್ಕೂಟರಿನಲ್ಲಿ ಬಿ ಸಿ ರೋಡಿನಿಂದ ಮುಡಿಪು ಕಡೆಗೆ ಕೆಲಸದ ನಿಮಿತ್ತ ತೆರಳುತ್ತಿದ್ದ ವೇಳೆ ಹಿಂದಿನಿಂದ ಬಂದ ಅಬೂಬಕ್ಕರ್ ಸಿದ್ದೀಕ್ ಎಂಬವರು ಚಲಾಯಿಸುತ್ತಿದ್ದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಗಂಭೀರ ಗಾಯಗೊಂಡ ರಾಮಣ್ಣ ನಾಯ್ಕ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಲಾರಿ ಚಾಲಕನ ದುಡುಕುತನ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ದೂರಲಾಗಿದೆ. 

ಘಟನಾ ಸ್ಥಳಕ್ಕೆ ಬಂಟ್ವಾಳ ಸಂಚಾರಿ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಸಜಿಪಮುನ್ನೂರು ನಿವಾಸಿ ದಾಮೋದರ ಅವರು ನೀಡಿದ ದೂರಿನಂತೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಮಾರ್ನಬೈಲು : ಸ್ಕೂಟರಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಸವಾರನ ಮೇಲೆ ಹರಿದ ಲಾರಿ, ಸ್ಕೂಟರ್ ಡ್ರೈವರ್ ಸ್ಪಾಟ್ ಡೆತ್ Rating: 5 Reviewed By: karavali Times
Scroll to Top