ಬೆಳ್ತಂಗಡಿ : ಸರಕಾರಿ ಶಾಲೆಯ ಅಕ್ಷರ ದಾಸೋಹ ಕೊಠಡಿಗೆ ನುಗ್ಗಿ ಗ್ಯಾಸ್ ಸಿಲಿಂಡರ್, ಮಿಕ್ಸಿ, ಜಾರ್ ಗಳನ್ನು ಕಳವುಗೈದ ಕಳ್ಳರು - Karavali Times ಬೆಳ್ತಂಗಡಿ : ಸರಕಾರಿ ಶಾಲೆಯ ಅಕ್ಷರ ದಾಸೋಹ ಕೊಠಡಿಗೆ ನುಗ್ಗಿ ಗ್ಯಾಸ್ ಸಿಲಿಂಡರ್, ಮಿಕ್ಸಿ, ಜಾರ್ ಗಳನ್ನು ಕಳವುಗೈದ ಕಳ್ಳರು - Karavali Times

728x90

7 June 2024

ಬೆಳ್ತಂಗಡಿ : ಸರಕಾರಿ ಶಾಲೆಯ ಅಕ್ಷರ ದಾಸೋಹ ಕೊಠಡಿಗೆ ನುಗ್ಗಿ ಗ್ಯಾಸ್ ಸಿಲಿಂಡರ್, ಮಿಕ್ಸಿ, ಜಾರ್ ಗಳನ್ನು ಕಳವುಗೈದ ಕಳ್ಳರು

 ಬೆಳ್ತಂಗಡಿ, ಜೂನ್ 07, 2024 (ಕರಾವಳಿ ಟೈಮ್ಸ್) : ಸರಕಾರಿ ಪಾಥಮಿಕ ಶಾಲೆಗೆ ನುಗ್ಗಿದ ಕಳ್ಳರು ಅಕ್ಷರ ದಾಸೋಹ ಕೊಠಡಿಯಲ್ಲಿದ್ದ ಗ್ಯಾಸ್ ಸಿಲಿಂಡರ್, ಮಿಕ್ಸಿ ಹಾಗೂ ಅದಕ್ಕೆ ಸಂಬಂಧಿಸಿದ ಜಾರ್ ಗಳನ್ನು ಕಳವುಗೈದ ಘಟನೆ ಕಣಿಯೂರು ಗ್ರಾಮದ ಪಿಲಿಗೂಡು ಎಂಬಲ್ಲಿನ ಸರಕಾರಿ ಶಾಲೆಯಲ್ಲಿ ಗುರುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. 

ಬುಧವಾರ ಸಂಜೆ ಶಾಲೆಗೆ ಬೀಗ ಹಾಕಿ ಹೋಗಿದ್ದು, ಗುರುವಾರ ಬೆಳಿಗ್ಗೆ ಶಾಲೆ ತೆರೆಯುವ ಸಂದರ್ಭ ಕಳ್ಳತನ ಕೃತ್ಯ ಬೆಳಕಿಗೆ ಬಂದಿದೆ. ಕಳವುಗೈಯಲಾದ ಸೊತ್ತುಗಳ ಒಟ್ಟು ಮೌಲ್ಯ 11 ಸಾವಿರ ರೂಪಾಯಿಗಳು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಶಾಲಾ ಮುಖ್ಯೋಪಾಧ್ಯಾಯ ಪ್ಲೇವಿಯ ಡಿ’ಸೋಜ ಅವರು ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಬೆಳ್ತಂಗಡಿ : ಸರಕಾರಿ ಶಾಲೆಯ ಅಕ್ಷರ ದಾಸೋಹ ಕೊಠಡಿಗೆ ನುಗ್ಗಿ ಗ್ಯಾಸ್ ಸಿಲಿಂಡರ್, ಮಿಕ್ಸಿ, ಜಾರ್ ಗಳನ್ನು ಕಳವುಗೈದ ಕಳ್ಳರು Rating: 5 Reviewed By: karavali Times
Scroll to Top