ಪುತ್ತೂರು, ನವೆಂಬರ್ 27, 2024 (ಕರಾವಳಿ ಟೈಮ್ಸ್) : ಪುತ್ತೂರು ಅಂಚೆ ವಿಭಾಗದ ತ್ರೈಮಾಸಿಕ ಅಂಚೆ ಅದಾಲತ್ ಡಿಸೆಂಬರ್ 13 ರಂದು ಬೆಳಿಗ್ಗೆ 10.30ಕ್ಕೆ ಪುತ್ತೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ನಡೆಯಲಿದೆ.
ಈ ಅದಾಲತ್ತಿನಲ್ಲಿ ಪುತ್ತೂರು, ಕಡಬ, ಸುಳ್ಯ, ಬಂಟ್ವಾಳ, ಮೂಡಬಿದ್ರೆ, ಬೆಳ್ತಂಗಡಿ, ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳ ವ್ಯಾಪ್ತಿಯ ಅಂಚೆ ಸೇವೆಗೆ ಸಂಬಂಧಪಟ್ಟ ಎಲ್ಲಾ ರೀತಿಯ ಸಾರ್ವಜನಿಕ ಕುಂದು ಕೊರತೆಗಳನ್ನು, ತಕರಾರುಗಳನ್ನು ಪರಿಶೀಲಿಸಲಾಗುವುದು.
ಸಾರ್ವಜನಿಕರು ಪುತ್ತೂರು ವಿಭಾಗಕ್ಕೆ ಸಂಬಂಧಪಟ್ಟ ದೂರುಗಳನ್ನು ಪತ್ರ ಮುಖೇನ, ಅಂಚೆ ಅದಾಲತ್ ತಲೆ ಬರಹದಡಿ ಡಿಸೆಂಬರ್ 11ರೊಳಗೆ ಹಿರಿಯ ಅಂಚೆ ಅಧೀಕ್ಷಕರು, ಪುತ್ತೂರು ವಿಭಾಗ, ಪುತ್ತೂರು-574 201 ವಿಳಾಸಕ್ಕೆ ದೂರುಗಳನ್ನು ಕಳುಹಿಸಬಹುದು. ಅಥವಾ ಅದೇ ದಿನ 10.30ರೊಳಗೆ ದೂರವಾಣಿ ಸಂಖ್ಯೆ 08251-230201, 230295ಕ್ಕೆ ನೇರವಾಗಿಯೂ ಸಂಪರ್ಕಿಸಬಹುದು. ತಮ್ಮ ದೂರುಗಳನ್ನು ಇಮೇಲ್ doputtur.ka@indiapost.gov.in ಮೂಲಕವೂ ಅದಾಲತ್ತಿಗೆ ಮೊದಲು ತಲುಪುವಂತೆ ಕಳುಹಿಸಬಹುದು. ಪುತ್ತೂರು ಅಂಚೆ ವಿಭಾಗಕ್ಕೆ ಸಂಬಂಧಿಸಿದ ದೂರುಗಳನ್ನು ಮಾತ್ರ ಪರಿಗಣಿಸಲಾಗುವುದು ಎಂದು ಪುತ್ತೂರು ಅಂಚೆ ವಿಭಾಗದ ಹಿರಿಯ ಅಧೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ.
0 comments:
Post a Comment