ವ್ಯಾಟಿಕನ್ ಸಿಟಿ, ಎಪ್ರಿಲ್ 21, 2025 (ಕರಾವಳಿ ಟೈಮ್ಸ್) : ಕ್ರೈಸ್ತ ಧರ್ಮೀಯರ ಜಾಗತಿಕ ಪರಮೋಚ್ಛ ಧರ್ಮಗುರು ಪೆÇೀಪ್ ಫ್ರಾನ್ಸಿಸ್ (88) ಅವರು ಎಪ್ರಿಲ್ 21 ರ ಈಸ್ಟರ್ ಸೋಮವಾರ ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ.
ಕಳೆದ ಕೆಲ ತಿಂಗಳುಗಳಿಂದ ಅನಾರೋಗ್ಯದಿಂದಿದ್ದ ಪೆÇೀಪ್ ಫ್ರಾನ್ಸಿಸ್ ವ್ಯಾಟಿಕನ್ ಸಿಟಿಯಲ್ಲಿರುವ ತಮ್ಮ ನಿವಾಸದಲ್ಲಿ ಸೋಮವಾರ ಮುಂಜಾನೆ ನಿಧನರಾಗಿದ್ದಾರೆ ಎಂದು ವ್ಯಾಟಿಕನ್ ಸಿಟಿ ಮೂಲಗಳು ಖಚಿತಪಡಿಸಿವೆ.
ರೋಮನ್ ಕ್ಯಾಥೋಲಿಕ್ ಚರ್ಚ್‍ನ ಮೊದಲ ಲ್ಯಾಟಿನ್ ಅಮೇರಿಕದ ಧರ್ಮಗುರುಗಳಾದ ಪೆÇೀಪ್ ಅನಾರೋಗ್ಯದ ಕಾರಣ ಸತತ ಮೂರನೇ ವರ್ಷ ವಾರ್ಷಿಕ ಗುಡ್ ಫ್ರೈಡೇ ಮೆರವಣಿಗೆಯಲ್ಲಿ ಹಾಜರಾಗಿರಲಿಲ್ಲ. ಭಾನುವಾರ ಬೆಳಿಗ್ಗೆ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರೊಂದಿಗಿನ ಖಾಸಗಿ ಸಭೆಯಲ್ಲಿ ಪೆÇೀಪ್ ಕಾಣಿಸಿಕೊಂಡಿದ್ದರು. ವೈದ್ಯರು ಪೆÇೀಪ್ ಫ್ರಾನ್ಸಿಸ್ ಅವರಲ್ಲಿ ವಿಶ್ರಾಂತಿಯಲ್ಲಿರಬೇಕೆಂದು ಸೂಚಿಸಿದ್ದರೂ ಈಸ್ಟರ್ ಭಾನುವಾರದಂದು ಭಕ್ತರಿಗೆ ದರ್ಶನ ನೀಡಿದ್ದರು.
ಈಸ್ಟರ್ ಭಾನುವಾರದ ಸಂದರ್ಭದಲ್ಲಿ ಪೆÇೀಪ್ ಫ್ರಾನ್ಸಿಸ್ ಅವರು ಧಾರ್ಮಿಕ ಸ್ವಾತಂತ್ರ್ಯ, ಸಹಿಷ್ಣುತೆ ಹಾಗೂ ಜಗತ್ತಿನ ಶಾಂತಿಗಾಗಿ ಭಾವನಾತ್ಮಕವಾಗಿ ಕರೆ ನೀಡಿದ್ದರು. ಸೇಂಟ್ ಪೀಟರ್ಸ್ ಬೆಸಿಲಿಕಾದ ಬಾಲ್ಕನಿಯಿಂದ 35 ಸಾವಿರಕ್ಕೂ ಅಧಿಕ ಮಂದಿಯನ್ನುದ್ದೇಶಿಸಿ ಮಾತನಾಡಿದ್ದ ಪೋಪ್ ಜನತೆಗೆ ಈಸ್ಟರ್ ಶುಭಾಶಯಗಳನ್ನು ಕೋರಿದ್ದರು.
ತಮ್ಮ ಕೊನೆಯ ಸಂದೇಶದಲ್ಲಿ ಅವರು ಧಾರ್ಮಿಕ ಸ್ವಾತಂತ್ರ್ಯ, ಚಿಂತನೆ ಮತ್ತು ಅಭಿವ್ಯಕ್ತಿಯ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ್ದರಲ್ಲದೆ ಜಾಗತಿಕ ಶಾಂತಿಗೆ ಇದೆಲ್ಲವೂ ಅಗತ್ಯವೆಂದು ಹೇಳಿದ್ದರು. ಇದೇ ವೇಳೆ ಗಾಜಾ ಯುದ್ಧವನ್ನು ಖಂಡಿಸಿದ್ದ ಪೋಪ್ ಫ್ರಾನ್ಸಿಸ್ ಅವರು ಕದನ ವಿರಾಮಕ್ಕೆ ಕರೆ ನೀಡಿದ್ದರು.
ಪೆÇೀಪ್ ಫ್ರಾನ್ಸಿಸ್ ಅವರ ನಿಧನದಿಂದ ಜಗತ್ತಿನೆಲ್ಲೆಡೆ ಕ್ರೈಸ್ತ ಸಮುದಾಯದಲ್ಲಿ ಶೋಕ ಮಡುಗಟ್ಟಿದೆ. ಜಗತ್ತಿನ ವಿವಿಧ ದೇಶಗಳ ಗಣ್ಯಾತಿಗಣ್ಯ ನಾಯಕರು ಪೋಪ್ ಅವರ ನಿಧನಕ್ಕೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
0 comments:
Post a Comment