ಮಂಗಳೂರು, ಮೇ 28, 2025 (ಕರಾವಳಿ ಟೈಮ್ಸ್) : ಮೇ 27 ರ ಮಂಗಳವಾರ ರಾತ್ರಿ ದುಲ್-ಹಜ್ ತಿಂಗಳ ಪ್ರಥಮ ದಿನದ ಚಂದ್ರದರ್ಶನ ಆಗದಿರುವ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೇ 29 ರಂದು ಗುರುವಾರ ದ್ಸುಲ್-ಹಜ್ ತಿಂಗಳ ಮೊದಲ ದಿನವಾಗಿದ್ದು, ಜೂನ್ 7 ರಂದು ಶನಿವಾರ ಈದುಲ್ ಅಳ್ಹಾ (ಬಕ್ರೀದ್) ಹಬ್ಬದ ಆಚರಣೆ ನಡೆಸಲು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಕರೆ ನೀಡಿದ್ದಾರೆ. ಜೂನ್ 6 ರಂದು ಶುಕ್ರವಾರ ಅರಫಾ ದಿನದ ಉಪವಾಸ ಆಚರಿಸುವಂತೆಯೂ ಅವರು ಕರೆ ನೀಡಿದ್ದಾರೆ.
ಸೌದಿ ಅರೇಬಿಯಾ ಸಹಿತ ವಿವಿಧ ಗಲ್ಫ್ ರಾಷ್ಟ್ರಗಳಲ್ಲಿ ಮಂಗಳವಾರ ರಾತ್ರಿ ದುಲ್ಹಜ್ ತಿಂಗಳ ಪ್ರಥಮ ಚಂದ್ರದರ್ಶನ ಆಗಿರುವ ಹಿನ್ನಲೆಯಲ್ಲಿ ಜೂನ್ 6 ರಂದು ಶುಕ್ರವಾರ ಈದುಲ್ ಅಳ್ಹಾ (ಬಕ್ರೀದ್) ಹಬ್ಬ ಆಚರಣೆ ನಡೆಯಲಿದೆ. ಜೂನ್ 5 ರಂದು ಗುರುವಾರ ಹಜ್ ಕರ್ಮದ ಪ್ರಧಾನ ಕರ್ಮವಾದ ಅರಫಾ ವಿಧಿ ವಿಧಾನ ನೆರವೇರಲಿದೆ. ಈಗಾಗಲೇ ಪವಿತ್ರ ಹಜ್ ಕರ್ಮದ ನಿರ್ವಹಣೆಗಾಗಿ ಜಗತ್ತಿನಾದ್ಯಂತ ಕೋಟ್ಯಂತರ ಮುಸ್ಲಿಮರು ಸೌದಿ ಅರೇಬಿಯಾದ ಮಕ್ಕಾ ಹಾಗೂ ಮದೀನಾದಲ್ಲಿ ಜಮಾಯಿಸಿದ್ದು, ಜೂನ್ 5 ರಂದು ಅರಫಾ ಮೈದಾನದಲ್ಲಿ ಏಕಕಾಲದಲ್ಲಿ ಜಮಾಯಿಸಿ ಹಜ್ ಕರ್ಮದ ಪ್ರಧಾನ ವಿಧಿ ವಿಧಾನ ನೆರವೇರಿಸಲಿದ್ದಾರೆ.
0 comments:
Post a Comment