ಅಜ್ಜಿಬೆಟ್ಟು : ಬಿ.ಮೂಡ ಸರಕಾರಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಬ್ಯಾಗ್ ಹಾಗೂ ಪುಸ್ತಕ ವಿತರಣೆ - Karavali Times ಅಜ್ಜಿಬೆಟ್ಟು : ಬಿ.ಮೂಡ ಸರಕಾರಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಬ್ಯಾಗ್ ಹಾಗೂ ಪುಸ್ತಕ ವಿತರಣೆ - Karavali Times

728x90

23 June 2025

ಅಜ್ಜಿಬೆಟ್ಟು : ಬಿ.ಮೂಡ ಸರಕಾರಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಬ್ಯಾಗ್ ಹಾಗೂ ಪುಸ್ತಕ ವಿತರಣೆ

ಬಂಟ್ವಾಳ, ಜೂನ್ 23, 2025 (ಕರಾವಳಿ ಟೈಮ್ಸ್) : ಯೂತ್ ಫಾರ್ ಸೇವಾ ಎಂಬ ಸ್ವಯಂ ಸೇವಾ ಸಂಸ್ಥೆ ವತಿಯಿಂದ ಬೆಂಗಳೂರಿನ ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಪ್ರಾಯೋಜಿಸಿದ ಬ್ಯಾಗ್ ಮತ್ತು ಬರೆಯುವ ಪುಸ್ತಕಗಳನ್ನು ಬಿ ಸಿ ರೋಡು ಸಮೀಪದ ಅಜ್ಜಿಬೆಟ್ಟುವಿನ ಬಿ ಮೂಡ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

ಬೆಂಗಳೂರಿನ ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಇಂಜಿನಿಯರುಗಳಾದ ರಿಯಾ ಸೈನಿ, ಪೂಜಿತಾ ಬಚು, ಭೂಮಿ ವವಾಡಿಯ, ಕುಂಜನ್ ಪಟೇಲ್, ಆಯುಷ್ ಗಾರ್ಗ್, ವಂಶ್ ಸಿಂಘಲ್ ಅವರು ಆಗಮಿಸಿ ಶಾಲೆಯ 107 ವಿದ್ಯಾರ್ಥಿಗಳಿಗೆ ಪುಸ್ತಕ, ಬ್ಯಾಗ್ ವಿತರಿಸಿ ಮಾತನಾಡಿ, ಎಳವೆಯಲ್ಲೇ ಚೆನ್ನಾಗಿ ವಿದ್ಯಾಭ್ಯಾಸ ಮಾಡಿದರೆ ಮುಂದೆ ಉತ್ತಮ ಸ್ಥಾನಮಾನಗಳನ್ನು ಹೊಂದಿ, ಭವಿಷ್ಯತ್ತಿನ ಭಾರತದ ಸತ್ಪ್ರಜೆಗಳಾಗಬಹುದು ಎಂದು ಅಭಿಪ್ರಾಯಪಟ್ಟರು.

ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ವಿನೋದಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಜಯಂತಿ, ಅನಿತಾ, ಕವಿತಾ, ನಿಶ್ಮಿತಾ, ಶಮೀಮಾ, ಶಿವಮೂರ್ತಿ, ಅತಿಥಿ, ಗೌರವ ಶಿಕ್ಷಕರಾದ ನಿಶ್ಮಿತಾ, ಪೂರ್ಣಿಮಾ, ಲಾವಣ್ಯ, ದಿವ್ಯಾ ಭಾಗವಹಿಸಿದ್ದರು. 

ಶಾಲಾ ಮುಖ್ಯ ಶಿಕ್ಷಕಿ ಲಕ್ಷ್ಮೀ ಕೆ ಸ್ವಾಗತಿಸಿ, ಎಸ್ ಡಿ ಎಂ ಸಿ ನಿಕಟಪೂರ್ವಾಧ್ಯಕ್ಷ ಹರೀಶ ಮಾಂಬಾಡಿ ಪ್ರಸ್ತಾವನೆಗೈದರು. ಸಹ ಶಿಕ್ಷಕಿಯರಾದ ತಾಹಿರಾ ವಂದಿಸಿ, ಸುಶೀಲಾ ಕಾರ್ಯಕ್ರಮ ನಿರೂಪಿಸಿದರು. 

  • Blogger Comments
  • Facebook Comments

0 comments:

Post a Comment

Item Reviewed: ಅಜ್ಜಿಬೆಟ್ಟು : ಬಿ.ಮೂಡ ಸರಕಾರಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಬ್ಯಾಗ್ ಹಾಗೂ ಪುಸ್ತಕ ವಿತರಣೆ Rating: 5 Reviewed By: karavali Times
Scroll to Top