ದುಬೈಯಲ್ಲಿ ಕೆಲಸ ಕೊಡಿಸುವುದಾಗಿ ಮಹಿಳೆಗೆ ಲಕ್ಷಾಂತರ ರೂಪಾಯಿ ವಂಚನೆ : ಬಂಟ್ವಾಳ ನಗರ ಠಾಣೆಯಲ್ಲಿ ಕೇಸು ದಾಖಲು - Karavali Times ದುಬೈಯಲ್ಲಿ ಕೆಲಸ ಕೊಡಿಸುವುದಾಗಿ ಮಹಿಳೆಗೆ ಲಕ್ಷಾಂತರ ರೂಪಾಯಿ ವಂಚನೆ : ಬಂಟ್ವಾಳ ನಗರ ಠಾಣೆಯಲ್ಲಿ ಕೇಸು ದಾಖಲು - Karavali Times

728x90

13 June 2025

ದುಬೈಯಲ್ಲಿ ಕೆಲಸ ಕೊಡಿಸುವುದಾಗಿ ಮಹಿಳೆಗೆ ಲಕ್ಷಾಂತರ ರೂಪಾಯಿ ವಂಚನೆ : ಬಂಟ್ವಾಳ ನಗರ ಠಾಣೆಯಲ್ಲಿ ಕೇಸು ದಾಖಲು

ಬಂಟ್ವಾಳ, ಜೂನ್ 13, 2025 (ಕರಾವಳಿ ಟೈಮ್ಸ್) : ದುಬೈಯಲ್ಲಿ ಉದ್ಯೋಗ ಇದೆ ಎಂದು ಮಹಿಳೆಯನ್ನು ನಂಬಿಸಿ ಲಕ್ಷಾಂತರ ರೂಪಾಯಿ ವಂಚಿಸಿದ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಬಿ ಕಸ್ಬಾ ಗ್ರಾಮದ ಚೆಂಡ್ತಿಮಾರ್ ಎಂಬಲ್ಲಿನ ಕಾರಿಂಜೇಶ್ವರ ರೆಸಿಡೆನ್ಸಿ ನಿವಾಸಿ ಸೈಯ್ಯದ್ ಅಫ್ಸರ್ ಅವರ ಪತ್ನಿ ಫರ್ಝಾನಾ (35) ಎಂಬಾಕೆ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಫರ್ಝಾನಾ ಅವರು ದುಬೈಯ ಸೂಪರ್ ಮಾರ್ಕೆಟಿನಲ್ಲಿ ಸೇಲ್ಸ್ ಗರ್ಲ್ ಆಗಿ ಸುಮಾರು 6 ತಿಂಗಳಿನಿಂದ ಕೆಲಸ ಮಾಡಿಕೊಂಡಿದ್ದರು. ದುಬೈಯಲ್ಲಿರುವಾಗ ಸರ್ಜಾದಲ್ಲಿ ಜಸ್ಸಿ ಪಂಜಾಬ್ ಎಂಬವರು  ಪರಿಚಯಸ್ಥರಾಗಿದ್ದು, ಬಳಿಕ ಭಾರತದಲ್ಲಿನ ತನ್ನ ಮನೆಗೆ ಬಂದ ಬಳಿಕ ಜಸ್ಸಿ ಪಂಜಾಭ್ ಅವರು ಪೆÇೀನ್ ಮಾಡಿ ಕೆಲಸ ಮಾಡಿಕೊಡಿಕೊಡುವುದಾಗಿ ಹೇಳಿರುತ್ತಾಳೆ. ಬಳಿಕ ಸಮೀರ್ ಎಂಬವನನ್ನು ಪರಿಚಿಯಿಸಿರುತ್ತಾಳೆ, ಬಳಿಕ ಸಮೀರ್ ಎಂಬವನು ವಾಟ್ಸಪ್ ಕರೆ ಮಾಡಿರುತ್ತಾನೆ. ಜಸ್ಸಿ ಪಂಜಾಬ್ ಎಂಬುವರು ನನಗೆ ನಿಮ್ಮ ಬಗ್ಗೆ ಹೇಳಿರುತ್ತಾಳೆ, ಜಬ್ಲಾಲಲಿ ದುಬೈ ಎಂಬಲ್ಲಿ ನನ್ನ ಫ್ಯಾಕ್ಟರಿ ಇದೆ ಈ ಪ್ಯಾಕ್ಟರಿಯಲ್ಲಿ ಯೂಸ್ ಆಂಡ್ ತ್ರೋ ಗ್ಲಾಸ್ ಉತ್ಪಾದಕ ಪ್ಯಾಕ್ಟರಿ ಇದೆ. ಈ ಪ್ಯಾಕ್ಟರಿಗೆ ಕಾರ್ಮಿಕರನ್ನು ಸೇರಿಸಿಕೊಳ್ಳುತ್ತಿದ್ದು, ನೀವು ಸಹಿತ ಇತರೆ 5 ಮಂದಿಯನ್ನು ಸೇರಿಸಿಕೊಂಡು ಪ್ರತಿಯೊಬ್ಬರಿಂದ 1.80 ಲಕ್ಷ ರೂಪಾಯಿ ಕಲೆಕ್ಟ್ ಮಾಡಿ ಕೊಡಬೇಕು ಎಂದು ಸಮೀರ್ ಎಂಬವರು ಹೇಳಿರುತ್ತಾರೆ. ಆದರೆ ನಾನು ಯಾರನ್ನು ಸೇರಿಸಿಕೊಡಲಿಲ್ಲ ಹಾಗೂ ಹಣವನ್ನು ಕಲೆಕ್ಟ್ ಮಾಡಿ ಕೊಡಲಿಲ್ಲ. 

ಬಳಿಕ ಮೇ 24 ರಂದು ಸಮೀರ್ ಎಂಬವನು ವಾಟ್ಸಪ್ ಕರೆ ಮಾಡಿ ವೀಸಾಕ್ಕಾಗಿ ಮುಂಗಡವಾಗಿ ಹಣ ಪಾವತಿಸುವಂತೆ ತಿಳಿಸಿ ಬ್ಯಾಂಕ್ ಖಾತೆಯ ವಿವರ ನೀಡಿ ಹಣವನ್ನು ವರ್ಗಾವಣೆ ಮಾಡುವಂತೆ ಹೇಳಿದಂತೆ ನಾನು ಅದೇ ದಿನ ನನ್ನ ಬ್ಯಾಂಕ್ ಖಾತೆಯಿಂದ ಸಮೀರ್ ನೀಡಿದ ಬ್ಯಾಂಕ್ ಖಾತೆಗೆ ಗೂಗಲ್ ಪೇ ಮುಖೇನ 80 ಸಾವಿರ ರೂಪಾಯಿ ಹಣವನ್ನು ಕಳುಹಿಸಿಕೊಟ್ಟಿರುತ್ತೇನೆ.  ನಂತರ ಹೆಚ್ಚುವರಿಯಾಗಿ ಹಣವನ್ನು ಪಾವತಿಸುವಂತೆ ಹೇಳಿ ಬ್ಯಾಂಕ್ ಖಾತೆಯನ್ನು ಕಳುಹಿಸಿಕೊಟ್ಟಂತೆ 1 ಲಕ್ಷ ಹಣವನ್ನು ವರ್ಗಾವಣೆ ಮಾಡಿರುತ್ತೇನೆ. ಬಳಿಕ ಸಮೀರ್ ಎಂಬವನಿಗೆ ಮೇಸೆಜ್ ಮಾಡಿ ವೀಸಾ ಯಾವಾಗ ಬರುತ್ತದೆ ಎಂದು ಕೇಳಿದಾಗ ಆದಷ್ಟೂ ಬೇಗನೆ ವೀಸಾ ಬರುವುದಾಗಿ ತಿಳಿಸಿರುತ್ತಾನೆ. ಆದರೆ ಜೂನ್ 1 ರಂದು ನನ್ನ ಪೆÇೀನ್ ನಂಬ್ರವನ್ನು ಬ್ಲಾಕ್ ಮಾಡಿರುತ್ತಾನೆ ಎಂದು ನೀಡಿದ ದೂರಿನಂತೆ ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ದುಬೈಯಲ್ಲಿ ಕೆಲಸ ಕೊಡಿಸುವುದಾಗಿ ಮಹಿಳೆಗೆ ಲಕ್ಷಾಂತರ ರೂಪಾಯಿ ವಂಚನೆ : ಬಂಟ್ವಾಳ ನಗರ ಠಾಣೆಯಲ್ಲಿ ಕೇಸು ದಾಖಲು Rating: 5 Reviewed By: karavali Times
Scroll to Top