ಬಂಟ್ವಾಳ, ಜೂನ್ 13, 2025 (ಕರಾವಳಿ ಟೈಮ್ಸ್) : ಬಿ ಸಿ ರೋಡ್ ಖಾಸಗಿ ಬಸ್ಸು ನಿಲ್ದಾಣದಲ್ಲಿರುವ ಪುರಸಭಾ ವಾಣಿಜ್ಯ ಸಂಕೀರ್ಣದಲ್ಲಿರುವ ಅಂಗಡಿ ಮಾಲಕರು ಕಟ್ಟಡದ ಪ್ಯಾಸೇಜುಗಳನ್ನು ಅತಿಕ್ರಮಿಸಿ ಸಾಮಾನು-ಸರಂಜಾಮುಗಳನ್ನು ಇರಿಸಿ ಸಾರ್ವಜನಿಕರು ನಡೆದಾಡಲೂ ಅಡಚಣೆ ಉಂಟಾಗಿರುವ ಬಗ್ಗೆ ಸಾರ್ವಜನಿಕ ದೂರಿನ ಹಿನ್ನಲೆಯಲ್ಲಿ ಶುಕ್ರವಾರ ಕಾರ್ಯಾಚರಣೆ ನಡೆಸಿದ ಪುರಸಭಾಧಿಕಾರಿಗಳು ತೆರವುಗೊಳಿಸಿದರು.
ಬಿ ಸಿ ರೋಡಿನ ಖಾಸಗಿ ಬಸ್ಸು ನಿಲ್ದಾಣದ ಪುರಸಭಾ ವಾಣಿಜ್ಯ ಸಂಕೀರ್ಣದ ಹೊರಗಿನ ಪ್ಯಾಸೇಜ್ ಗಳನ್ನು ಪೂರ್ಣವಾಗಿ ಅಂಗಡಿದಾರರು ಅತಿಕ್ರಮಿಸಿಕೊಂಡಿದ್ದು, ತಮ್ಮ ಸಾಮಾನು ಸರಂಜಾಮುಗಳನ್ನು ತುಂಬಿಸಿಟ್ಟಿದ್ದರು. ಮಳೆಗಾಲದಲ್ಲಿ ಮಳೆ ಬರುವ ಸಂದರ್ಭದಲ್ಲಾಗಲೀ, ಬೇಸಿಗೆ ಕಾಲದಲ್ಲಿ ಬಿಸಿಲಿಗಾಗಲೀ ಸಾರ್ವಜನಿಕರು ಸಂಕೀರ್ಣದ ಪ್ಯಾಸೇಜುಗಳಲ್ಲಿ ಒಂದಷ್ಟು ಆಶ್ರಯ ಪಡೆಯಲೂ ಇಲ್ಲಿನ ಅಂಗಡಿದಾರರು ಅಡ್ಡಿಯಾಗಿದ್ದು, ಸಾರ್ವಜನಿಕರನ್ನು ನಿಲ್ಲಲೂ ಅಡ್ಡಿಪಡಿಸುತ್ತಿದ್ದರು. ಈ ಹಿನ್ನಲೆಯಲ್ಲಿ ಸಾರ್ವಜನಿಕರು ಪುರಸಭೆಗೆ ದೂರಿಕೊಂಡ ನಿಟ್ಟಿನಲ್ಲಿ ಶುಕ್ರವಾರ ಪುರಸಭಾಧಿಕಾರಿಗಳು ಕಾರ್ಯಾಚರಣೆ ನಡೆಸಿ ಅತಿಕ್ರಮಣವನ್ನು ತೆರವುಗೊಳಿಸಿದ್ದಾರೆ.
0 comments:
Post a Comment