ನಾವೂರು-ಹಳೆಗೇಟು : ಸ್ಕೂಟರ್ ಡಿಕ್ಕಿಯಾಗಿ ಮಹಿಳೆ ಆಸ್ಪತ್ರೆಗೆ - Karavali Times ನಾವೂರು-ಹಳೆಗೇಟು : ಸ್ಕೂಟರ್ ಡಿಕ್ಕಿಯಾಗಿ ಮಹಿಳೆ ಆಸ್ಪತ್ರೆಗೆ - Karavali Times

728x90

4 June 2025

ನಾವೂರು-ಹಳೆಗೇಟು : ಸ್ಕೂಟರ್ ಡಿಕ್ಕಿಯಾಗಿ ಮಹಿಳೆ ಆಸ್ಪತ್ರೆಗೆ

ಬಂಟ್ವಾಳ, ಜೂನ್ 04, 2025 (ಕರಾವಳಿ ಟೈಮ್ಸ್) : ಸ್ಕೂಟರ್ ಡಿಕ್ಕಿ ಹೊಡೆದು ಪಾದಚಾರಿ ಮಹಿಳೆ ಗಾಯಗೊಂಡ ಘಟನೆ ನಾವೂರು ಗ್ರಾಮದ ಹಳೆಗೇಟು ಎಂಬಲ್ಲಿ ಜೂನ್ 2 ರಂದು ರಾತ್ರಿ ಸಂಭವಿಸಿದೆ. 

ಗಾಯಾಳು ಮಹಿಳೆಯನ್ನು ನಾವೂರು ನಿವಾಸಿ ಶ್ರೀಮತಿ ಪೂರ್ಣಿಮಾ ಎಂದು ಹೆಸರಿಸಲಾಗಿದೆ. ಇವರು ಹಳೆಗೇಟು ಬಸ್ಸು ನಿಲ್ದಾಣ ಕಡೆಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಬಿ ಸಿ ರೋಡು ಕಡೆಯಿಂದ ಬೆಳ್ತಂಗಡಿ ಕಡೆಗೆ ಶಾನ್ ಡಿ ಮೆಲ್ಲೋ ಎಂಬವರು ಚಲಾಯಿಸಿಕೊಂಡು ಬಂದ ಸ್ಕೂಟರ್ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ. ಅಪಘಾತದಿಂದ ಮಹಿಳೆ ಹಾಗೂ ಸ್ಕೂಟರ್ ಸವಾರ ಇಬ್ಬರೂ ರಸ್ತೆಗೆ ಎಸೆಯಲ್ಪಟ್ಟು ಗಾಯಗೊಂಡಿದ್ದಾರೆ. ಗಾಯಾಳು ಪೂರ್ಣಿಮಾ ಅವರನ್ನು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಕೂಟರ್ ಸವಾರ ಕೂಡಾ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ನಾವೂರು-ಹಳೆಗೇಟು : ಸ್ಕೂಟರ್ ಡಿಕ್ಕಿಯಾಗಿ ಮಹಿಳೆ ಆಸ್ಪತ್ರೆಗೆ Rating: 5 Reviewed By: karavali Times
Scroll to Top