ಬಂಟ್ವಾಳ, ಜೂನ್ 02, 2025 (ಕರಾವಳಿ ಟೈಮ್ಸ್) : ಹಿರಿಯ ಕಾರು ಚಾಲಕ, ಕಲ್ಲಡ್ಕ ನಿವಾಸಿ ಸುಲೈಮಾನ್ (93) ಅವರು ವಯೋಸಹಜ ಅನಾರೋಗ್ಯದಿಂದ ಮಂಗಳವಾರ ಸ್ಥಳೀಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮೃತರು ಕಳೆದ 70 ವರ್ಷಗಳಿಂದ ಕಾರು ಚಾಲಕರಾಗಿ ದುಡಿದ ಶ್ರಮಜೀವಿಯಾಗಿದ್ದು, ಸ್ವಾತಂತ್ರ್ಯಾನಂತರ ಪ್ರಥಮವಾಗಿ ವಾಹನ ಚಾಲನಾ ಪರವಾನಿಗೆ ಆರಂಭವಾದ 1955ನೇ ಇಸವಿಯಲ್ಲಿ ಚಾಲನಾ ಪರವಾನಿಗೆ ಪಡೆದಿದ್ದರು. ಅಂದಿನ ಆ ದಿನಗಳಲ್ಲಿ ಕಲ್ಲಡ್ಕದಿಂದ ಮುಂಬಯಿಗೆ ಕಾರಿನಲ್ಲಿ ಪ್ರಯಾಣ ಬೆಳೆಸಿದ ಹೆಗ್ಗಳಿಕೆ ಇವರದ್ದು ಎನ್ನುತ್ತಾರೆ ಸ್ಥಳೀಯರು.
70 ವರ್ಷಗಳ ತಮ್ಮ ಚಾಲಕ ಸೇವಾವಧಿಯಲ್ಲಿ ಕಲ್ಲಡ್ಕದ ಪರಿಸರದ ಹಲವು ಮಂದಿ ಚಾಲನಾ ತರಬೇತಿಯನ್ನೂ ನೀಡಿದ್ದರು. ಕಲ್ಲಡ್ಕದ ಕಾಂಗ್ರೆಸ್ ಮುಖಂಡ ದಿವಂಗತ ಇಸ್ಮಾಯಿಲ್ ಕಲ್ಲಡ್ಕ, ಉದ್ಯಮಿ ದಿವಂಗತ ಸೇಸಾರಿ ಶಾಫಿ ಹಾಜಿ (ಸೇಸರಾಜಿ) ಅವರ ಸಹೋದರರಾಗಿರುವ ಸುಲೈಮಾನ್ ಅವರು ಪತ್ನಿ, ಓರ್ವ ಪುತ್ರ, ನಾಲ್ವರು ಪುತ್ರಿಯರ ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
0 comments:
Post a Comment