ಬಂಟ್ವಾಳ, ಜೂನ್ 23, 2025 (ಕರಾವಳಿ ಟೈಮ್ಸ್) : ಕುಲುಮೆ ಕೆಲಸದ ಅಂಗಡಿಗೆ ನುಗ್ಗಿದ ಕಳ್ಳರು ಸಾವಿರಾರು ರೂಪಾಯಿ ನಗದು ಹಣ ಬ್ಯಾಂಕಿನ ಫಿಕ್ಸ್ಡ್ ಡೆಪಾಸಿಟ್ ಬಾಂಡ್ ಕಳವುಗೈದ ಘಟನೆ ಅಮ್ಟಾಡಿ ಗ್ರಾಮದ ಲೊರೆಟ್ಟೊಪದವು ಎಂಬಲ್ಲಿ ಭಾನುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಬಿ ಕಸಬಾ ಗ್ರಾಮದ ನಿವಾಸಿ ಕಮಲಾಕ್ಷ (43) ಅವರಿಗೆ ಸೇರಿದ ಅಂಗಡಿಯಲ್ಲಿ ಈ ಕಳವು ಘಟನೆ ನಡೆದಿದೆ. ಇವರು ಕಳೆದ 24 ವರ್ಷಗಳಿಂದ ಲೊರೆಟ್ಟೊಪದವು ಎಂಬಲ್ಲಿ ಅಂಗಡಿ ಇಟ್ಟು ಕುಲುಮೆ ಕೆಲಸ ಮಾಡಿಕೊಂಡಿದ್ದಾರೆ. ಪ್ರತಿದಿನ ಬೆಳಿಗ್ಗೆ 10 ಗಂಟೆಗೆ ಅಂಗಡಿ ತೆರೆದು ಕಾರ್ಯನಿರ್ವಹಿಸಿ ಸಂಜೆ 6 ಗಂಟೆಗೆ ಅಂಗಡಿ ಬಂದ್ ಮಾಡಿ ಮನೆಗೆ ತೆರಳುತ್ತಿದ್ದರು. ಶನಿವಾರ ಸಂಜೆ ಕೂಡಾ ಅಂಗಡಿ ಬಂದ್ ಮಾಡಿ ಮನೆಗೆ ತೆರಳಿದ್ದು, ಭಾನುವಾರ ಬೆಳಿಗ್ಗೆ ಅಂಗಡಿಯ ಎದುರಿನ ತಗಡು ಶೀಟಿನಿಂದ ಬಾಗಿಲಿಗೆ ಅಳವಡಿಸಿದ ಬೀಗ ಮುರಿದು ಒಳಪ್ರವೇಶಿಸಿದ ಕಳ್ಳರು, ಕಮಲಾಕ್ಷ ಅವರು ಕಟ್ಟುತ್ತಿದ್ದ ಹೊಸ ಮನೆಗೆ ಸಾಮಾಗ್ರಿ ಖರೀದಿಗೆಂದು ಸಂಗ್ರಹಿಸಿ ಡ್ರಾವರಿನಲ್ಲಿಟ್ಟಿದ್ದ 65 ಸಾವಿರ ರೂಪಾಯಿ ನಗದು ಹಣ ಹಾಗೂ ಅಲ್ಲೇ ಇಟ್ಟಿದ್ದ ಕೆನರಾ ಬ್ಯಾಂಕಿನಿಂದ ಪಡೆದಿದ್ದ ಫಿಕ್ಸ್ಡ್ ಡೆಪಾಸಿಟ್ ಬಾಂಡ್ ಕಳವುಗೈಯಲಾಗಿದೆ. ಈ ಬಗ್ಗೆ ಕಮಲಾಕ್ಷ ಅವರು ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment