ಬಂಟ್ವಾಳ, ಜೂನ್ 09, 2025 (ಕರಾವಳಿ ಟೈಮ್ಸ್) : ತಾಲೂಕಿನ ವೀರಕಂಭ ಗ್ರಾಮದ ಹರೆಬೆಟ್ಟು ಎಂಬಲ್ಲಿ ನಡೆಯುತ್ತಿದ್ದ ಕೋಳಿ ಅಂಕದ ಸ್ಥಳಕ್ಕೆ ವಿಟ್ಲ ಪೊಲೀಸರು ದಾಳಿ ನಡೆಸಿದ ಘಟನೆ ಭಾನುವಾರ ರಾತ್ರಿ ನಡೆದಿದೆ.
ವಿಟ್ಲ ಠಾಣಾ ಪಿಎಸ್ಸೈ ರತ್ನಕುಮಾರ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಶಂಕರ, ಗದಿಗೆಪ್ಪ, ಸಾಬು ಮಿರ್ಜಿ, ಮಾಯಪ್ಪ ಹಾಗೂ ಯಂಕಪ್ಪ ಅವರ ತಂಡ ಖಚಿತ ಮಾಹಿತಿ ಮೇರೆಗೆ ಈ ದಾಳಿ ಸಂಘಟಿಸಿದ್ದು, ಆದರೆ ಪೊಲೀಸರನ್ನು ಕಂಡು ಜೂಜುಕೋರರು ಸ್ಥಳದಿಂದ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ. ಕೊರಗ ಶೆಟ್ಟಿ ಮಾಣಿ ಹಾಗೂ ಇತರರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ದೊರೆತಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment