ಪುಣಚ : ಇಂಟರ್ ಲಾಕ್ ಘಟಕಕ್ಕೆ ನುಗ್ಗಿ ಸೀಸಿ ಟೀವಿ ಹಾನಿ ಪ್ರಕರಣ ಬೇಧಿಸಿದ ವಿಟ್ಲ ಪೊಲೀಸರು, ಇಬ್ಬರು ಅಪ್ರಾಪ್ತರು ವಶಕ್ಕೆ - Karavali Times ಪುಣಚ : ಇಂಟರ್ ಲಾಕ್ ಘಟಕಕ್ಕೆ ನುಗ್ಗಿ ಸೀಸಿ ಟೀವಿ ಹಾನಿ ಪ್ರಕರಣ ಬೇಧಿಸಿದ ವಿಟ್ಲ ಪೊಲೀಸರು, ಇಬ್ಬರು ಅಪ್ರಾಪ್ತರು ವಶಕ್ಕೆ - Karavali Times

728x90

29 September 2025

ಪುಣಚ : ಇಂಟರ್ ಲಾಕ್ ಘಟಕಕ್ಕೆ ನುಗ್ಗಿ ಸೀಸಿ ಟೀವಿ ಹಾನಿ ಪ್ರಕರಣ ಬೇಧಿಸಿದ ವಿಟ್ಲ ಪೊಲೀಸರು, ಇಬ್ಬರು ಅಪ್ರಾಪ್ತರು ವಶಕ್ಕೆ

ಬಂಟ್ವಾಳ, ಸೆಪ್ಟೆಂಬರ್ 29, 2025 (ಕರಾವಳಿ ಟೈಮ್ಸ್) : ತಾಲೂಕಿನ ಪುಣಚ ಗ್ರಾಮದ ಪಾಲಾಸ್ತಡ್ಕ ಎಂಬಲ್ಲಿರುವ ಪಿ ಬಿ ಇಂಡಸ್ಟ್ರೀಸ್ ಎಂಬ ಇಂಟರ್ ಲಾಕ್ ಘಟಕಕ್ಕೆ ನುಗ್ಗಿ ಸೀಸಿ ಕ್ಯಾಮೆರಾ ತುಂಡರಿಸಿ ಡಿವಿಆರ್ ಹಾಗೂ ದೇವರ ಫೋಟೋ ನೆಲದ ಮೇಲೆ ಸುಟ್ಟು ಹಾಕಿರುವ ಘಟನೆ ಬೇಧಿಸಿರುವ ಘಟನೆ ಬೇಧಿಸಿರುವ ವಿಟ್ಲ ಪೊಲೀಸರು ಇಬ್ಬರು ಅಪ್ರಾಪ್ತ ಬಾಲಕರನ್ನು ಪತ್ತೆ ಹಚ್ಚಿದ್ದಾರೆ. 

ಘಟನೆ ಬಗ್ಗೆ ಘಟಕದ ಮಾಲಕಿಯ ಪತಿ ಆನಂದ ಗೌಡ ಅವರು ಪೊಲೀಸರಿಗೆ ದೂರು ನೀಡಿದ್ದರು. ಇವರ ಪತ್ನಿ ಹೆಸರಿನಲ್ಲಿ ಪುಣಚ ಗ್ರಾಮದ ಪಾಲಾಸ್ತಡ್ಕ ಎಂಬಲ್ಲಿ ಪಿ ಬಿ ಇಂಡಸ್ಟ್ರೀಸ್ ಎಂಬ ಇಂಟರ್ ಲಾಕ್ ಘಟಕ ಕಾರ್ಯಾಚರಿಸುತ್ತಿದ್ದು, ಸದ್ರಿ ಘಟಕಕ್ಕೆ ಸಿಸಿ ಕ್ಯಾವiರಾ ಅಳವಡಿಸಲಾಗಿದೆ. ಸೆ 28 ರಂದು ಸಂಜೆ 6 ಗಂಟೆಗೆ ಇಂಟರ್ ಲಾಕ್ ಘಟಕಕ್ಕೆ  ಹೋದಾಗ ಯಾರೋ ಘಟಕದ ಬಾಗಿಲನ್ನು ಮುರಿದು ಇಂಟರ್ ಲಾಕ್ ಘಟಕಕ್ಕೆ ಅಕ್ರಮ ಪ್ರವೇಶ ಮಾಡಿ ಅಳವಡಿಸಿದ್ದ 2 ಸಿಸಿ ಕ್ಯಾಮರಾಗಳನ್ನು ತುಂಡರಿಸಿದ್ದಲ್ಲದೇ, ಸಿಸಿ ಕ್ಯಾಮರಾದ ಡಿವಿಆರ್ ಮತ್ತು ದೇವರ ಪೆÇೀಟೋ ನೆಲದ ಮೇಲೆ ಸುಟ್ಟು ಹಾಕಿರುವುದು ಕಂಡು ಬಂದಿತ್ತು ಎಂದು ದೂರು ನೀಡಿದ್ದರು. 

ಪ್ರಕರಣಕ್ಕೆ ಸಂಭದಿಸಿದಂತೆ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಡಿವಿಆರ್ ಸುಟ್ಟು ಹೋಗಿದ್ದರೂ ಮಾಲಿಕರ ಮೊಬೈಲ್‍ಗೆ ಸಿಸಿಟಿವಿ ಸಂಪರ್ಕ ಇದ್ದುದರಿಂದ ಕೃತ್ಯವೆಸಗಿದ ಇಬ್ಬರು ಅಪ್ರಾಪ್ತ ಬಾಲಕರನ್ನು ವಶಕ್ಕೆ ಪಡೆದು ಪೆÇೀಷಕರ ಸಮಕ್ಷಮ ವಿಚಾರಣೆ ನಡೆಸಿದಾಗ ಅವರು ತಪ್ಪು ಒಪ್ಪಿಕೊಂಡಿರುತ್ತಾರೆ. ಅವರನ್ನು ಬಾಲಾಪರಾಧಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಪುಣಚ : ಇಂಟರ್ ಲಾಕ್ ಘಟಕಕ್ಕೆ ನುಗ್ಗಿ ಸೀಸಿ ಟೀವಿ ಹಾನಿ ಪ್ರಕರಣ ಬೇಧಿಸಿದ ವಿಟ್ಲ ಪೊಲೀಸರು, ಇಬ್ಬರು ಅಪ್ರಾಪ್ತರು ವಶಕ್ಕೆ Rating: 5 Reviewed By: karavali Times
Scroll to Top