ಬೆಳ್ತಂಗಡಿ, ಅಕ್ಟೋಬರ್ 23, 2025 (ಕರಾವಳಿ ಟೈಮ್ಸ್) : ಅಟೋ ರಿಕ್ಷಾದಲ್ಲಿ ಜಾನುವಾರು ಮಾಂಸ ಸಾಗಾಟ ಪ್ರಕರಣ ಬೇಧಿಸಿದ ಬೆಳ್ತಂಗಡಿ ಪೊಲೀಸರು ಅಟೋ ರಿಕ್ಷಾ ಸಹಿತ ಮಾಂಸವನ್ನು ವಶಪಡಿಸಿಕೊಂಡ ಘಟನೆ ಲಾಯಿಲ ಜಂಕ್ಷನ್ ಬಳಿ ಬುಧವಾರ ಸಂಭವಿಸಿದೆ.
ಬುಧವಾರ ಬೆಳ್ತಂಗಡಿ ಪೊಲೀಸ್ ಠಾಣಾ ಪಿಎಸ್ಸೈ ಆನಂದ ಎಂ ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಬಂದ ಖಚಿತ ಮಾಹಿತಿ ಮೇರೆಗೆ ಲಾಯಿಲ ಗ್ರಾಮದ ಲಾಯಿಲ ಜಂಕ್ಷನ್ ಬಳಿ ಆರೋಪಿ ಹಕೀಂ ಎಂಬಾತನು ಕೆಎ70 0694 ನೋಂದಣಿ ಸಂಖ್ಯೆಯ ಅಟೋ ರಿಕ್ಷಾದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಜಾನುವಾರಿನ ಮಾಂಸವನ್ನು ಕೊಲ್ಲಿ ಕಡೆಯಿಂದ ಲಾಯಿಲ ಕಡೆಗೆ ಸಾಗಾಟ ಮಾಡಿಕೊಂಡು ಬರುತ್ತಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಪೊಲೀಸರನ್ನು ನೋಡಿದ ಆರೋಪಿ ಆಟೋ ರಿಕ್ಷಾ ನಿಲ್ಲಿಸಿ, ಘಟನಾ ಸ್ಥಳದಿಂದ ಪರಾರಿಯಾಗಿದ್ದಾನೆ. ಅಟೋ ರಿಕ್ಷಾದಲ್ಲಿ ಸುಮಾರು 21,250/- ರೂಪಾಯಿ ಮೌಲ್ಯದ 85 ಕೆಜಿಯಷ್ಟು ಜಾನುವಾರು ಮಾಂಸ ಪತ್ತೆಯಾಗಿದೆ. ಅಕ್ರಮ ಮಾಂಸ ಸಾಗಾಟಕ್ಕೆ ಬಳಸಿದ 2.50 ಲಕ್ಷ ರೂಪಾಯಿ ಮೌಲ್ಯದ ಅಟೋ ರಿಕ್ಷಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಪರಾರಿಯಾದ ಆರೋಪಿಗಾಗಿ ಬಲೆ ಬೀಸಿದ್ದಾರೆ.

















0 comments:
Post a Comment