ಮಂಗಳೂರು, ಅಕ್ಟೋಬರ್ 24, 2025 (ಕರಾವಳಿ ಟೈಮ್ಸ್) : ಸುರತ್ಕಲ್ ದೀಪಕ್ ಬಾರ್ ಬಳಿ ಗುರುವಾರ ರಾತ್ರಿ 11 ಗಂಟೆ ಸುಮಾರಿಗೆ ನಾಲ್ವರ ತಂಡ ಇಬ್ಬರಿಗೆ ಚೂರಿಯಿಂದ ಇರಿದ ಘಟನೆ ವರದಿಯಾಗಿದೆ.
ಇರಿತದಿಂದ ಗಾಯಗೊಂಡವರನ್ನು ಮುಕ್ಷೀದ್ ಹಾಗೂ ನಿಜಾಮ್ ಎಂದು ಹೆಸರಿಸಲಾಗಿದೆ. ಆರೋಪಿಗಳನ್ನು ರೌಡಿಶೀಟರ್ ಹಾಗೂ ಭಜರಂಗದಳ ಸಕ್ರಿಯ ಕಾರ್ಯಕರ್ತ ಗುರುರಾಜ್, ಆತನ ಸ್ನೇಹಿತ ಅಲೆಕ್ಸ್ ಸಂತೋಷ್, ಸುಶಾಂತ್ ಹಾಗೂ ನಿತಿನ್ ಎಂದು ಗುರುತಿಸಲಾಗಿದೆ.
ಮುಕ್ಷೀದ್, ನಿಜಾಂ ಹಾಗೂ ಇತರ ಇಬ್ಬರು ಬಾರಿಗೆ ಹೋಗಿ ಮದ್ಯ ಸೇವಿಸುತ್ತಿದ್ದ ವೇಳೆ ಅಲ್ಲಿದ್ದ ಆರೋಪಿಗಳು ಅವರೊಂದಿಗೆ ವಾಗ್ವಾದ ನಡೆಸಿದ್ದಾರೆ ಮತ್ತು ಎರಡೂ ಕಡೆಯವರು ಬಾರಿನಿಂದ ಹೊರಗೆ ಹೋದ ನಂತರವೂ ಅದು ಮುಂದುವರೆಯಿತು.
ಆರೋಪಿಗಳ ಪೈಕಿ ಓರ್ವ ಚಾಕು ತೆಗೆದು ಇರಿದಿದ್ದಾನೆ. ಇರಿತದಿಂದ ನಿಜಾಮನ ಹೊಟ್ಟೆಗೆ ಹಾಗೂ ಮುಕ್ಷೀದನ ಕೈಗೆ ಗಾಯವಾಗಿದೆ. ಗಾಯಾಳುಗಳು ಅಪಾಯದಿಂದ ಪಾರಾಗಿದ್ದಾರೆ. ಆರೋಪಿಗಳ ವಿರುದ್ದ ಸುರತ್ಕಲ್ ಪೆÇಲೀಸ್ ಠಾಣೆಯಲ್ಲಿ 307 ಪ್ರಕರಣ ದಾಖಲಾಗಿದೆ.
ಆರೋಪಿಗಳ ಬಂಧನಕ್ಕೆ ಪೊಲೀಸ್ ತಂಡ ರಚಿಸಲಾಗಿದ್ದು, ಮಧ್ಯರಾತ್ರಿಯೇ ಆರೋಪಿಗಳ ಅಡಗುದಾಣಗಳಿಗೆ ಪೊಲೀಸರು ದಾಳಿ ನಡೆಸಿದ್ದಾರಾದರೂ ಅದಾಗಲೇ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ತಿಳಿಸಿದ್ದಾರೆ.

















0 comments:
Post a Comment