ಬಂಟ್ವಾಳ, ಅಕ್ಟೋಬರ್ 20, 2025 (ಕರಾವಳಿ ಟೈಮ್ಸ್) : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿಧಾನಸಭಾ ಸ್ಪೀಕರ್ ಯು ಟಿ ಖಾದರ್ ಅವರ ಕ್ಷೇತ್ರವಾದ ಫರಂಗಿಪೇಟೆ ಜಂಕ್ಷನ್ನಿನಲ್ಲಿ ಸ್ಥಳೀಯ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಭರ್ಜರಿಯಾಗಿ ಸ್ವಾಗತಿಸಿದರು.
ಸಿಎಂ ಪುತ್ತೂರಿಗೆ ತೆರಳುವ ಮಾರ್ಗ ಮಧ್ಯೆ ಫರಂಗಿಪೇಟೆ ಹೆದ್ದಾರಿ ಬದಿಯಲ್ಲಿ ಕೆಪಿಸಿಸಿ ಸದಸ್ಯ ಹಾಗೂ ಜಿ ಪಂ ಮಾಜಿ ಸದಸ್ಯ ಉಮ್ಮರ್ ಫಾರೂಕ್ ಹಾಗೂ ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭಾರೀ ಸಂಖ್ಯೆಯಲ್ಲಿ ಜಮಾಯಿಸಿ ಹೂಮಳೆ ಸುರಿಸಿ, ಪಟಾಕಿ ಸಿಡಿಸಿ, ನಾಸಿಕ್ ಬ್ಯಾಂಡ್ ಗಳ ಮೂಲಕ ಭಾಗ್ಯಗಳ ಸರದಾರ, ಬಡವರ ಬಂಧು, ಮಹಿಳಾ ಸಬಲೀಕರಣದ ರೂವಾರಿ ಸಿಎಂ ಸಿದ್ದರಾಮಯ್ಯ ಅವರಿಗೆ ಜೈ ಎಂಬ ಘೋಷಣೆಗಳ ಮೂಲಕ ಜಯಘೋಷ ಮೊಳಗಿಸಿದರು.
ಸ್ಪೀಕರ್ ಕ್ಷೇತ್ರದಲ್ಲಿ ಕೆಲ ಹೊತ್ತು ಪಕ್ಷದ ಕಾರ್ಯಕರ್ತರೊಂದಿಗೆ ಸಾವಧಾನದಿಂದಲೇ ಕಳೆದ ಸಿಎಂ ಸಿದ್ದರಾಮ್ಯ ಉಮ್ಮರ್ ಫಾರೂಕ್ ಹಾಗೂ ರಮ್ಲಾನ್ ಮಾರಿಪಳ್ಳ ಅವರಿಂದ ಕೆಲವು ಮನವಿ ಸ್ವೀಕರಿಸಿ ಸೂಕ್ತ ಸ್ಪಂದನೆಯ ಭರವಸೆ ನೀಡಿದರು.
ಫರಂಗಿಪೇಟೆಯಲ್ಲಿ ಕ್ರೀಡಾಪಟುಗಳ ಹಿತದೃಷ್ಟಿಯಿಂದ ಕ್ರೀಡಾಂಗಣ ನಿರ್ಮಾಣ, ಪಂಚಾಯತ್ ವ್ಯಾಪ್ತಿಯ 9-11 ಸಹಿತ ಜಮೀನು ಸಮಸ್ಯೆಗಳು ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಖತೀಬ್ ಹಾಗೂ ಮುಅಝ್ಝಿನ್ ಗಳಿಗೆ ನೀಡುವ ಗೌರವ ಧನ ಯೋಜನೆಯನ್ನು ಎಲ್ಲ ಧಾರ್ಮಿಕ ಅಧ್ಯಾಪಕ ವೃಂದಕ್ಕೂ ವಿಸ್ತರಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಲಿಖಿತ ಮನವಿ ಸಲ್ಲಿಸಲಾಯಿತು.
ಈ ಸಂದರ್ಭ ಕೆಪಿಸಿಸಿ ಸದಸ್ಯರುಗಳಾದ ಉಮ್ಮರ್ ಫಾರೂಕ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪುದು ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಉಪಾಧ್ಯಕ್ಷೆ ರುಕ್ಸಾನಾ ಬಾನು, ಅಮ್ಮೆಮಾರು ಮಸೀದಿ ಅಧ್ಯಕ್ಷ ಅಬೂಸಾಲಿಹ್ ಮುಸ್ಲಿಯಾರ್, ಮದ್ರಸ ಮ್ಯಾನೇಜ್ ಮೆಂಟ್ ಅಧ್ಯಕ್ಷ ಹಸನಬ್ಬ, ಪ್ರಮುಖರಾದ ಆಸಿಫ್ ಇಕ್ಬಾಲ್, ಇಕ್ಬಾಲ್ ಸುಜೀರು, ಪ್ರಕಾಶ್ ಶೆಟ್ಟಿ ಶ್ರೀ ಶೈಲ ತುಂಬೆ, ವೃಂದಾ ಪೂಜಾರಿ ಸಹಿತ ಸ್ಥಳೀಯ ಗ್ರಾ ಪಂ ಸದಸ್ಯರುಗಳು, ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
































0 comments:
Post a Comment